ಸಕಲೇಶಪುರ : ಅನಾರೋಗ್ಯದಿಂದ ಬಳಲುತ್ತಿದ್ದ ಡಿ.ಬನ್ನೇರಿ ( 55 ) ಇಂದು ಅವರ ಕುಶಾಲನಗರ ಬಡಾವಣೆಯ ಮೇಘಲ ಕೊಪ್ಪಲು ( ಸಿದ್ದಿವಿನಾಯಕ ಗ್ಯಾಸ್ ಏಜೆನ್ಸಿ ಹಿಂಭಾಗ) ಇರುವ ಅವರ ನಿವಾಸದಲ್ಲಿ ನಿಧನ ಹೊಂದಿದ್ದಾರೆ.
ಮೃತರ ಅಂತ್ಯಕ್ರಿಯೆ 3 ಘಂಟೆಗೆ ಸುಭಾಷ್ ಮೈದಾನದ ಪಕ್ಕದಲ್ಲಿರುವ ಸಾರ್ವಜನಿಕ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಭದ ಮೂಲಗಳು ತಿಳಿಸಿವೆ.
ಮೃತರ ಆತ್ಮಕ್ಕೆ ಮಾಜಿ ಸಚಿವರಾದ ಹೆಚ್.ಕೆ.ಕುಮಾರಸ್ವಾಮಿ, ಮಾಜಿ ಶಾಸಕ ಹೆಚ್.ಎಂ.ವಿಶ್ವನಾಥ್, ಕಾಂಗ್ರೆಸ್ ಮುಖಂಡರಾದ ಮುರುಳಿ ಮೋಹನ್, ಪತ್ರಕರ್ತರ ಸಂಘದ ಅದ್ಯಕ್ಷ ಜೈಭೀಮ್ ಮಂಜು, ಪುರಸಭೆ ಮಾಜಿ ಅದ್ಯಕ್ಷ ಕಾಡಪ್ಪ, ದಸಂಸ ಮುಖಂಡರಾದ ರಮೇಶ್ ನಾಗರ, ವಳಲಹಳ್ಳಿ ವೀರೇಶ್, ಹೆತ್ತೂರು ಅಣ್ಣಯ್ಯ, ರಾಜಶೇಖರ್ ಮಾಸ್ಟರ್ ಇತರರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.