ಸಕಲೇಶಪುರ :- ಸನಾತನ ಸೇವಾ ಟ್ರಸ್ಟ್ (ರಿ.)ರ ನೂತನ ವರ್ಷದ ಕ್ಯಾಲೆಂಡರ್ ನ್ನು ಯಸಳೂರು ಹೋಬಳಿಯ ತೆಂಕಲಗೂಡು ಬೃಹನ್ಮಠದ ಶ್ರೀ ಷ. ಬ್ರ. ಚನ್ನಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಜಿಯವರು ಬಿಡುಗಡೆ ಮಾಡಿದರು.

ನಂತರ ಆಶೀರ್ವಾಚನ ನೀಡಿ ” ಸನಾತನ ಸೇವಾ ಟ್ರಸ್ಟ್ ಸ್ಥಾಪನೆಯಾಗಿ ಕೆಲವೇ ದಿನಗಳಾಗಿದ್ದರು ಕೂಡ ಅದರ ಸೇವಾ ಮನೋಭಾವನೆ ತುಂಬಾ ದೊಡ್ಡದಾಗಿದೆ .ಇವತ್ತು ಸಮಾಜದ ಸೇವೆಯನ್ನು ಮಾಡಬೇಕೆಂಬ ಮನೋಭಾವನೆಗಳು ಬಹಳಷ್ಟು ಜನರಲ್ಲಿ ಕಡಿಮೆಯಾಗುತ್ತಿದೆ.

ಮನುಷ್ಯನ ಜೀವನ ಸಾರ್ಥಕತೆಯಾಗಬೇಕಾದರೆ ಸೇವಾ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ನಮಗೆ ಇರುವ 24 ಗಂಟೆಗಳಲ್ಲಿ ಕನಿಷ್ಠ ಒಂದೆರಡು ಗಂಟೆಗಳ ಆದರೂ ಸಮಾಜಕ್ಕಾಗಿ ಸೇವೆಯನ್ನು ಮಾಡಬೇಕು. ಸನಾತನ ಎಂಬ ಹೆಸರಲ್ಲಿ ನಮ್ಮ ಧರ್ಮ ಸತ್ವ ಅಡಗಿದೆ..ನಾವು ನ್ಯಾಯ, ನೀತಿ,ಸತ್ಯದ ಹಾದಿಯಲ್ಲಿ ನಡೆಯುವುದರ ಜೊತೆಗೆ ಧರ್ಮವನ್ನು ಉಳಿಸುವ ಕೆಲಸ ಮಾಡಬೇಕಿದೆ.

ಇತರಹ ಸೇವಾ ಮನೋಭಾವನೆ ಇರುವ ಸಂಘ ಸಮುಸ್ಥೆ ಸಮಾಜದಲ್ಲಿ ಇರಬೇಕು.ಎಂದರು

ನಂತರ ಮಾತನಾಡಿದ ಸನಾತನ ಸೇವಾ ಟ್ರಸ್ಟ್ (ರಿ.) ಅಧ್ಯಕ್ಷರಾದ ಏನ್. ಎಸ್ ಮಂಜುನಾಥ್ ಸಂಘಿ ” ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿದ ತೆಂಕಲಗೂಡು ಬೃಹನ್ಮಠದ ಶ್ರೀ ಷ. ಬ್ರ. ಚನ್ನಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಜಿ ಧನ್ಯವಾದಗಳು.

ಇವರ ಆಶೀರ್ವಾದದಿಂದ ಈ ವರ್ಷ ನಾಡಿಗೆ ಒಳ್ಳೆ ಮಳೆ, ಬೆಳೆ ಆಗಿ ಸಕಲ ಜೀವರಾಶಿಗಳು ಆರೋಗ್ಯವಾಗಿ ನೆಮ್ಮದಿಯಾಗಿ ಬದುಕುವಂತಗಾಲಿ. ನಮ್ಮ ಸೇವಾ ಟ್ರಸ್ಟ್ ಮೂಲಕ ನೂತನ ವರ್ಷ ದಿಂದ ಉತ್ತಮ ಸಮಾಜಮುಖಿ ಕೆಲಸ ಮಾಡಲಿದ್ದೀವಿ”. ಎಂದರು

ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಜಾನಕೆರೆ ಲೋಕೇಶ್, ಸದಸ್ಯರಾದ ಜೆ.ವಿ. ಲೋಹಿತ್,ಹೆಚ್.ಎನ್, ಪುಟ್ಟಸ್ವಾಮಿಗೌಡ್ರು,ಕುಸುಮಭೂಪಾಲ್, ಜಯೇಂದ್ರ (ಐನಾರು), ರಘುಗೌಡ,ಎ.ಎಂ. ಕುಮಾರಸ್ವಾಮಿ,ಜಯರಾಜ್,ಆರ್. ಯಸಳೂರು ದೀಲಿಪ್ ಬಾಲ್‌ರಾಜ್,ಸುಧೀಶ್ ಎನ್‌,ನೇತ್ರ ಸುರೇಶ್, ಅಣ್ಣಪ್ಪ ಓಂನಗರ, ಗಗನ್ ಟಿ.ಎಸ್, ಅನಿಲ್, ಸಂಪಗೂಡು, ಕಿರಣ್,ಹೆಚ್.ಸಿ. ಸಂದೇಶ್, ಹೆತ್ತೂರು ಯಸಳೂರು ಪ್ರಖಂಡ ವಿ. ಹೆಚ್. ಪಿ ಕಾರ್ಯದರ್ಶಿ ಹೆತ್ತೂರು ಸುರೇಶ, ವಳಲಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಹಿರಿದನಹಳ್ಳಿ ಹೂವಣ್ಣ ಇದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *