
ಸಕಲೇಶಪುರ : ತಾಲೂಕಿನ ವಿವಿಧ ಭಾಗಗಳಲ್ಲಿರುವ ದೇವಸ್ಥಾನಗಳಿಗೆ ತಮ್ಮ ವಿಧಾನ ಪರಿಷತ್ ಸದಸ್ಯರ ಅನುದಾನದಲ್ಲಿ ನೀಡಲಾಗಿದ್ದ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಿಂದಾಗಿ ಅವರ ಸದಸ್ಯರಿಗೆ ಅಭಿವೃದ್ಧಿಗೆ ಹಣ ನೀಡುತ್ತಿಲ್ಲ ರಸ್ತೆ ನಿರ್ಮಾಣ ಮುಂತಾದ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡಲು ಸಾದ್ಯವಾಗುತ್ತಿಲ್ಲ ಆದುದರಿಂದ ಸಕಲೇಶಪುರ ತಾಲೂಕಿನ ವಿವಿದ ದೇವಸ್ಥಾನಗಳಿಗೆ 2 ಲಕ್ಷ ರೂಪಾಯಿ ಅನುದಾನ ನೀಡಿದ್ದು ಮುಂದಿನ ದಿನಗಳಲ್ಲಿ ದೇವಸ್ಥಾನಗಳ ಮೂಲಭೂತ ಸೌಕರ್ಯಗಳಿಗೆ ದೇವಸ್ಥಾನದ ಸಮಿತಿಯವರು ಮನವಿ ಮಾಡಿದರೆ ಹೆಚ್ಚಿನ ಸಹಕಾರ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಚಂಚಲ ಕುಮಾರಸ್ವಾಮಿ, ಜೆಡಿಎಸ್ ಮುಖಂಡರಾದ ಸ.ಬ.ಭಾಸ್ಕರ್, ಕವನ್ ಗೌಡ ,ಪುರಸಭೆ ಸದಸ್ಯ ಪ್ರಜ್ವಲ್, ಟಿಎಪಿಸಿಎಂಎಸ್ ಸದಸ್ಯ ಕರಗೂರು ರಮೇಶ್ ,ಜಾತಹಳ್ಳಿ ರಘು, ಹಾಗೂ ಶ್ರೀ ಕಪ್ಪಿನಕೋಡಿ ಚೌಡೇಶ್ವರಿ ದೇವಸ್ಥಾನದ ಸಮಿತಿಯ ಸದಸ್ಯರು ಇದ್ದರು.

