
ಸಕಲೇಶಪುರ : ಪಟ್ಟಣದ ಮಳಲಿ ಬೈಪಾಸ್ ಹತ್ತಿರ ಇಂದು ಮುಂಜಾನೆ 2:30 ರ ಸಮಯದಲ್ಲಿ ಬೆಂಗಳೂರಿ ನಿಂದ ಮಂಗಳೂರು ಮಾರ್ಗವಾಗಿ ಬರುತ್ತಿದ್ದ ಪ್ಯಾಸೆಂಜರ್ ಇದ್ದ ಭಾರತ್ ಎಂಬ ಖಾಸಗಿ ಬಸ್ಸು ಡಿವೈಡರ್ ಗೆ ಡಿಕ್ಕಿ ಹೊಡೆದ ರಭಸಕ್ಕೆ ಬಸ್ಸಿನ ಮುಂಭಾಗ ಸಂಪೂರ್ಣ ನುಜ್ಜು ಗುಜ್ಜಾಗಿದ್ದು. ಚಾಲಕ ಹಾಗೂ ಪ್ರಯಾಣಿಕರು ಬಾರಿ ಅನಾಹುತದಿಂದ ಪಾರಾದ ಘಟನೆ ಮಳಲಿ ಬೈಪಾಸಿನಲ್ಲಿ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಕೊಲ್ಲಳ್ಳಿಯಿಂದ ಮಳಲಿ ಬೈಪಾಸ್ ಮಾರ್ಗವಾಗಿ ಚಲಿಸುವ ವಾಹನಗಳಿಗೆ ಪೂರ್ಣ ಪ್ರಮಾಣ ರಸ್ತೆ ದುರಸ್ತಿ ಕಲ್ಪಿಸದ ಕಾರಣ ಏಕಮುಖ ರಸ್ತೆಯಲ್ಲಿ ಬಂದು ಬದಲಿ ಸರ್ವಿಸ್ ರಸ್ತೆಗೆ ಚಲಿಸುವ ಮುನ್ನ ದಿವೈಡರ್ ಗೆ ಡಿಕ್ಕಿ ಹೊಡೆದು ಈ ಒಂದು ದುರಂತ ಸಂಭವಿಸಿರುವುದಾಗಿ ಸ್ಥಳೀಯ ಸಾರ್ವಜನಿಕರು ತಿಳಿಸಿರುತ್ತಾರೆ.
ಮಳಲಿ ಬೈಪಾಸ್ ವೃತ್ತ ದಲ್ಲಿ ಸಾಕಷ್ಟು ಬಾರಿ ಅಪಘಾತಗಳು ಸಂಭವಿಸಿದ್ದು ಇದಕ್ಕೆ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ಅವೈಜ್ಞಾನಿಕ ಕಾಮಗಾರಿ ಕಾರಣ ಎಂದು ಗ್ರಾಮ ಪಂಚಾಯಿತಿ ಸದಸ್ಯರಾದ ಶಿವಕುಮಾರ್ ತಿಳಿಸಿರುತ್ತಾರೆ.



