
ಸಕಲೇಶಪುರ : ತಾಲೂಕು ಬೆಳಗೋಡು ಹೋಬಳಿ ಉದಯವಾರ ಪಂಚಾಯತ್ ಹೊಸಕೊಪ್ಪಲು ಗ್ರಾಮದ ಕೃಷಿಕರಾದ ಹುಲಿಯಪ್ಪ ಗೌಡ ನವೀನ ತ್ಯಾಗರಾಜು ಚಂದ್ರೇಗೌಡ ಅಣ್ಣೇಗೌಡ ಅವರ ಕಟಾವಿಗೆ ಬಂದಿದ್ದ ಬತ್ತವನ್ನು ಕಾಡಾನೆಗಳು ಸಂಪೂರ್ಣವಾಗಿ ತಿಂದು ತುಳಿದು ಹಾಳು ಮಾಡಿವೆ ಮತ್ತು ಹೆಬ್ಬನಹಳ್ಳಿ ಮತ್ತು ಸಿಡಿಗಳಲೆ ಗ್ರಾಮದ ರೈತರು ಬೆಳೆದ ಭತ್ತದ ಗದ್ದೆಯನ್ನು ಸಂಪೂರ್ಣವಾಗಿ ನಾಶ ಮಾಡಿವೆ
ಆನೆಗಳನ್ನು ಸಂಪೂರ್ಣವಾಗಿ ಸ್ಥಳಾಂತರ ಮಾಡಬೇಕು ಎಂದು ಸುತ್ತಮುತ್ತಲಿನ ಗ್ರಾಮಸ್ಥರು ಸಂಬಂಧಪಟ್ಟ ಅರಣ್ಯ ಇಲಾಖೆಯವರಿಗೆ ಎಷ್ಟು ಮನವಿ ಮಾಡಿದರೂ ಕೂಡ ರೈತರ ಕಷ್ಟಕ್ಕೆ ಯಾವುದೇ ಅಧಿಕಾರಿಗಳು ರೈತರ ಕಷ್ಟಾನ ಕೇಳೋರಿಲ್ಲ ಮತ್ತು ಕಾಡಾನೆ ಸಮಸ್ಯೆಯಿಂದ ತೋಟದ ಕೆಲಸಕ್ಕೆ ಮತ್ತು ಭತ್ತದ ಕೆಲಸಕ್ಕೆ ಮತ್ತು ಕಾಫಿ ಹಣ್ಣು ಕೊಯ್ಲಿಕೆ ಜನಗಳು ಸಹ ಬರುತ್ತಿಲ್ಲ ಇದರಿಂದ ರೈತರು ತುಂಬಾ ಮನನೊಂದಿದ್ದಾರೆ
ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಆನೆಗಳಿಂದ ರೈತರನ್ನು ರಕ್ಷಿಸಬೇಕೆಂದು ನಾಗೇಂದ್ರ ಹೊಸಕೋಪ್ಪಲು ಅವರು ಮನವಿ ಮಾಡಿಕೊಂಡಿದ್ದಾರೆ



