ಮುರುಡೇಶ್ವರ : ಕಡಲ ತೀರದಲ್ಲಿ ಈಜಲು ಹೋಗಿದ್ದ ಶಾಲಾ ವಿದ್ಯಾರ್ಥಿನಿಯರು ನೀರು ಪಾಲಾಗಿರುವ ಘಟನೆ ಮುರುಡೇಶ್ವರದಲ್ಲಿ ನಡೆದಿದೆ.

7 ವಿದ್ಯಾರ್ಥಿನಿಯರು ಸಮುದ್ರದಲ್ಲಿ ಈಜುವಾಗ ಅಲೆಗೆ ಸಿಲುಕಿ ಮುಳುಗಿ ಹೋಗಿದ್ದಾರೆ. ದುರಂತದಲ್ಲಿ ಓರ್ವ ವಿದ್ಯಾರ್ಥಿನಿ ಸಾವನ್ನಪ್ಪಿದ್ದು, ಇನ್ನೂ ಮೂರು ವಿದ್ಯಾರ್ಥಿನಿಯರ ರಕ್ಷಿಸಲು ಶೋಧ ಕಾರ್ಯ ಮುಂದುವರಿದಿದೆ.

ಕೋಲಾರ ಜಿಲ್ಲೆ ಮುಳಬಾಗಿಲಿನ ಕೊತ್ತೂರು ಮೋರಾರ್ಜಿ ದೇಸಾಯಿ ವಸತಿ ಶಾಲೆಯ 54 ವಿದ್ಯಾರ್ಥಿನಿಯರು, 6 ಮಂದಿ ಶಿಕ್ಷಕರ ಜೊತೆ ಪ್ರವಾಸಕ್ಕೆಂದು ಭಟ್ಕಳ ತಾಲೂಕಿನ ಮುರುಡೇಶ್ವರಕ್ಕೆ ತೆರಳಿದ್ದರು.

ಕಡಲ ತೀರದಲ್ಲಿ ವಿದ್ಯಾರ್ಥಿನಿಯರು ಈಜಲು ಹೋದಾಗ ಈ ಅನಾಹುತ ಸಂಭವಿಸಿದೆ

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *