
ಸಕಲೇಶಪುರ : ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ವತಿಯಿಂದ 10–12–2024ರ ಮಂಗಳವಾರ ಬೆಳೆಗಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬೆಳೆಗಾರರ ಬೆಳೆಯ ಬಗ್ಗೆ, ಬೆಳೆಗೆ ಯಾವ ಸಮಯದಲ್ಲಿ ಯಾವ ಕೆಲಸ ಮಾಡಬೇಕು ಮಳೆಯ ವಿವರಗಳನ್ನೊಳಗೊಂಡ ಡೈರಿಯನ್ನು ಸಕಲೇಶಪುರದ ವೃತ್ತ ನಿರೀಕ್ಷೆಕ ನಿರಂಜನ್ ಕುಮಾರ್ ರವರು ಬಿಡುಗಡೆ ಮಾಡಿದರು.
ಡೈರಿ ಬಿಡುಗಡೆ ಮಾಡಿದ ನಿರಂಜನ್ ಕುಮಾರ್ ರವರು ಡೈರಿ ತಮ್ಮ ದಿನನಿತ್ಯದ ಲೆಕ್ಕಾ ಪತ್ರ, ಹಾಗೂ ಹಾಗುಹೋಗುಗಳನ್ನು ದಾಖಲಿಸಲು ಒಂದು ಉತ್ತಮ ಸಾಧನ ವಾಗಿದ್ದು, ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘವು ಬಹಳ ವಿಶೇಷವಾಗಿ ಡೈರಿಯನ್ನು ಹೊರತಂದಿದ್ದು, ಜಿಲ್ಲೆಯ ಎಲ್ಲಾ ಅಧಿಕಾರಿಗಳ ವಿವರಗಳು ಹಾಗೂ ರೈತರಿಗೆ ಬೇಕಾದ ಎಲ್ಲಾ ಮಾಹಿತಿ ಒದಗಿಸಿದ್ದು ಯಾವುದೇ ಒಬ್ಬ ವ್ಯಕ್ತಿ ಈ ಒಂದು ಡೈರಿ ಆಧಾರದ ಮೇಲೆ ತನ್ನ ತೋಟವನ್ನು ನಿರ್ವಹಣೆ ಮಾಡಬಹುದಾಗಿದ್ದು, ಸಾರ್ವಜನಿಕ ರು ಇದರ ಉಪಯೋಗವನ್ನು ಪಡೆದು ಕೊಳ್ಳಬಹುದಾಗಿದೆ ಎಂದರು,
ಹಾಗೆಯೇ ಈ ಡೈರಿ ಹೊರ ತಂದಿರುವ ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘಕ್ಕೆ ಅಭಿನಂದನೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ಅಧ್ಯಕ್ಷರು,ಕಾರ್ಯದರ್ಶಿ,ಉಪಾಧ್ಯಕ್ಷರು, ಖಜಾಂಚಿ ಹಾಗೂ ಕರ್ನಾಟಕ ಗ್ರೋವರ್ ಫೆಡರೇಶನ್ ಅಧ್ಯಕ್ಷ dr ಮೋಹನ್ ಕುಮಾರ್ ರವರು ಉಪಸ್ಥಿತಿಯಿದ್ದರು.
ಡೈರಿಯ ಬೆಲೆ 350 ರೂ ಗಳಾಗಿದ್ದು ಬಾಳೆಗದ್ದೆಯ ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ಕಚೇರಿಯಲ್ಲಿ ದೊರೆಯಲಿದೆ
