
ಹೈದ್ರಾಬಾದ್ನ ಸಂಧ್ಯಾ ಥಿಯೇಟರ್ನಲ್ಲಿ ಕಾಲ್ತುಳಿತಕ್ಕೆ ಬಲಿಯಾಗಿದ್ದ ಮಹಿಳೆಯ ಪ್ರಕರಣದಲ್ಲಿ ಅಲ್ಲು ಅರ್ಜುನ್ ಬಂಧನವಾಗಿತ್ತು ಹಾಗೂ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೂ ಕೂಡ ನೀಡಲಾಗಿತ್ತು. ಇದನ್ನು ಪ್ರಶ್ನಿಸಿ ಅಲ್ಲು ಅರ್ಜುನ್ ಪರ ವಕೀಲರು ಹೈಕೋರ್ಟ್ ಮೊರೆ ಹೋಗಿದ್ದರು. ಸದ್ಯ ವಾದ ವಿವಾದಗಳನ್ನು ಆಲಿಸಿದ ಹೈಕೋರ್ಟ್ ಮಧ್ಯಂತರ ಜಾಮೀನನ್ನು ನೀಡಿದೆ
ಹೈಕೋರ್ಟ್ನಲ್ಲಿ ವಾದ ಮಾಡಿದ ಅಲ್ಲು ಅರ್ಜುನ್ ಅವರ ವಕೀಲರು ಈ ಪ್ರಕರಣದಲ್ಲಿ ಅಲ್ಲು ಅರ್ಜುನ್ ಪಾತ್ರವಿಲ್ಲ. ಉದ್ದೇಶಪೂರ್ವಕವಾಗಿ ನಡೆದಂತಹ ಸಾವು ಇದಲ್ಲ ಎಂದು ಹೇಳಿದ್ದಾರೆ. ಈ ಹಿಂದೆ ಗುಜರಾತ್ನ ಬರೋಡಾದಲ್ಲಿ ಬಾಲಿವುಡ್ ಆ್ಯಕ್ಟರ್ ಶಾರುಖ್ ಖಾನ್ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಹಾಗೂ ಅವರಿಗೆ ಸಿಕ್ಕ ಜಾಮೀನಿನ ವಿಚಾರವನ್ನು ಹೈಕೋರ್ಟ್ಗೆ ನೆನಪಿಸಿದ ವಕೀಲರು ಆ ಕೇಸ್ನಂತೆ ಈ ಪ್ರಕಣದಲ್ಲಿಯೂ ಕೂಡ ಆರೋಪಿಯ ಪಾತ್ರವಿಲ್ಲ ಹೀಗಾಗಿ ಈ ಪ್ರಕರಣವನ್ನು ರದ್ದು ಮಾಡಬೇಕು ಎಂದು ವಾದಿಸಿದ್ದಾರೆ
