ಹಾಸನ: ಹನುಮ ಜಯಂತಿ ಅಂಗವಾಗಿ ಶುಕ್ರವಾರ ಬೆಳಿಗ್ಗೆ ಹಿಂದೂ ಹಿತರಕ್ಷಣಾ ಪರಿಷತ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬೃಹತ್ ಶೋಭಾಯಾತ್ರೆ ಮೆರವಣಿಗೆಯಲ್ಲಿ ಮಹನೀಯರ ಭಾವಚಿತ್ರಗಳು ಗಮನಸೆಳೆದವು.

ಹಿಂದೂ ಹಿತರಕ್ಷಣ ಪರಿಷತ್ ವತಿಯಿಂದ ಹನುಮ ಜಯಂತಿ ಅಂಗವಾಗಿ ನಗರದ ಪಂಚಮುಖಿ ಗಣಪತಿ ಸರ್ಕಲ್ ನಿಂದ ಬೃಹತ್ ಶೋಭಾ ಯಾತ್ರೆ ಪ್ರಾರಂಭವಾಗಿ ಈ ವೇಳೆ ಬಾಲ ರಾಮನ ಮೂರ್ತಿ ಜೊತೆಗೆ ಹನುಮನ ಮೂರ್ತಿ ಹಾಗೂ ಮಹನೀಯರ ಭಾವಚಿತ್ರಗಳನ್ನು ಆಟೋ ಗಳ ಮೇಲಿರಿಸಿ ಮೆರವಣಿಗೆ ನಡೆಸುವ ಮೂಲಕ ಶೋಭಾ ಯಾತ್ರೆಗೆ ಮೆರಗು ತಂದವು. ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗಿತು.

ಇದೆ ವೇಳೆ ಹಿಂದೂ ಹಿತರಕ್ಷಣಾ ಪರಿಷತ್ ನ ಅಧ್ಯಕ್ಷ ವಿಶಾಲ್ ಅಗರ್ವಾಲ್, ಪ್ರಧಾನ ಕಾರ್ಯದರ್ಶಿ ಉಮೇಶ್, ಖಜಾಂಚಿ ಪವನ್, ತಾಲೂಕು ಸಂಚಾಲಕ ಅರುಣ್, ತಾಲೂಕು ಕಾರ್ಯದರ್ಶಿ ಅಕ್ಷಯ್, ಮೋಹನ್ ಇತರರು ಉಪಸ್ಥಿತರಿದ್ದರು. ನೂರಾರು ಸಂಖ್ಯೆಯ ಮುಖಂಡರು ಹಾಗೂ ಹಿಂದೂ ಭಾಂದವರು ವಿವಿಧ ಕಲಾ ತಂಡಗಳೊಂದಿಗೆ ನಡೆದ ಮೆರವಣಿಗೆಯಲ್ಲಿ ಪಾಲ್ಗೊಂಡು ಬಜನೆ ಮಾಡುವ ಜೊತೆಗೆ ಡೊಳ್ಳು ಕುಣಿತದ ವೇಳೆ ಕುಣಿದು ಕುಪ್ಪಳಿಸಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *