
ಬೇಲೂರು : ತಾಲೂಕು ಅರೇಹಳ್ಳಿ ಹೋಬಳಿ ಬ್ಯಾದನೆ ಗ್ರಾಮದ ನಿವಾಸಿ ಹಾಗೂ ಮಾಜಿ ಗ್ರಾಪಂ ಅಧ್ಯಕ್ಷರಾಗಿದ್ದ ವಸಂತ್‌ರವರು(೪೫) ಶಿಥಿಲಗೊಂಡಿದ್ದ ಹಳೆ ಮನೆ ಗೋಡೆಯು ಅಚಾನಕ್ಕಾಗಿ ಮೈಮೇಲೆ ಬಿದ್ದ ಪರಿಣಾಮ ಅಕಾಲಿಕ ಮರಣಕ್ಕೆ ತುತ್ತಾಗಿದ್ದಾರೆ.
ಮೃತರಿಗೆ ಪತ್ನಿ, ಒಂದು ಹೆಣ್ಣು ಹಾಗೂ ಒಂದು ಗಂಡು ಮಗುವಿದ್ದು ಖಾಸಗಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆಯುತ್ತಿದ್ದಾರೆ.
ಕಾಂಗ್ರೆಸ್ ಮುಖಂಡರಾಗಿ ಗುರುತಿಸಿಕೊಂಡಿದ್ದ ಮೃತ ವಸಂತ್ ೨೦೦೫-೦೭ರವರೆಗೆ ನಾರ್ವೆ ಗ್ರಾಪಂ ಅಧ್ಯಕ್ಷರಾಗಿ ಕಾರ‍್ಯನಿರ್ವಹಿಸಿದ್ದರು.
ಇವರ ಅಂತ್ಯ ಸಂಸ್ಕಾರವು ಸಾರ್ವಜನಿಕ ರುದ್ರಭೂಮಿಯಲ್ಲಿ ಜರುಗಿತು.
