ಕಲೋತ್ಸವ ಸ್ಪರ್ಧೆ: ಪೆಲ್ಸ್ಟನ್ ರಾಜ್ಯಮಟ್ಟಕ್ಕೆ ಆಯ್ಕೆ ಅರೇಹಳ್ಳಿ : ಹಾಸನದ ವಾಸವಿ ವಿದ್ಯಾಸಂಸ್ಥೆಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜರುಗಿದ ೨೦೨೪-೨೫ನೇ ಸಾಲಿನ ಜಿಲ್ಲಾ ಮಟ್ಟದ ಕಲೋತ್ಸವ ಹಾಗೂ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಬೇಲೂರು ತಾಲೂಕು ಅರೇಹಳ್ಳಿಯ ಅಂಬೇಡ್ಕರ್ ನಗರದಲ್ಲಿರುವ ಅನುಗ್ರಹ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ೧೦ನೇ ತರಗತಿ ವಿದ್ಯಾರ್ಥಿ ಪೆಲ್ಸ್ಟನ್ ಭಾಗವಹಿಸಿ ಆಶುಭಾಷಣ ಸ್ಪರ್ಧೆಯಲ್ಲಿ ಬಾಲ್ಯ ವಿವಾಹಕ್ಕೆ ಸಂಬಂಧಿಸಿದ ವಿಷಯವನ್ನು ಮಂಡಿಸಿ ೮ ತಾಲೂಕು ಸ್ಪರ್ಧಿಗಳ ಪೈಕಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಇನ್ನೋರ್ವ ೯ನೇ ತರಗತಿ ವಿದ್ಯಾರ್ಥಿ ಮೊಹಮ್ಮದ್ ಬಿಲಾಲ್ ಅರೇಬಿಕ್ ಧಾರ್ಮಿಕ ಪಠಣದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

ತಾಲೂಕಿಗೆ ಹಾಗೂ ಹೋಬಳಿಗೆ ಖ್ಯಾತಿ ತಂದ ವಿದ್ಯಾರ್ಥಿಗಳನ್ನು ಶಾಲೆಯ ವ್ಯವಸ್ಥಾಪಕರಾದ ಫಾ.ಕಿರಣ್ ಮೆಲ್ವಿನ್, ಮುಖ್ಯ ಶಿಕ್ಷಕ ರಂಜಿತ್ ಕುಮಾರ್ ಕೆ.ಎಸ್, ಶಿಕ್ಷಕರಾದ ಸುಮಿತಾ ಕೀರ್ತಿ, ನಿರ್ಮಲ, ಚಂದ್ರು, ಜ್ಯೋತಿ ಹಾಗೂ ಗ್ರೇಷಿಯನ್ ಮೆನೆಜಸ್ ಅಭಿನಂದಿಸಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *