
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮನವಿಯ ನಂತ್ರ ಮಣಿಪುರದ ವಿವಿಧ ಸ್ಥಳಗಳಲ್ಲಿ 140ಕ್ಕೂ ಹೆಚ್ಚು ಶಸ್ತ್ರಾಸ್ತ್ರಗಳನ್ನ ಒಪ್ಪಿಸಲಾಗಿದೆ ಎಂದು ಮೂಲಗಳು ಶುಕ್ರವಾರ ತಿಳಿಸಿವೆ.ನಾಲ್ಕು ದಿನಗಳ ಮಣಿಪುರ ಭೇಟಿಯ ಕೊನೆಯ ದಿನವಾದ ಗುರುವಾರ ಅಮಿತ್ ಶಾ, ಭದ್ರತಾ ಪಡೆಗಳು ಮತ್ತು ಆಡಳಿತಕ್ಕೆ ತಮ್ಮ ಶಸ್ತ್ರಾಸ್ತ್ರಗಳನ್ನ ಒಪ್ಪಿಸುವಂತೆ ಸಂಬಂಧಪಟ್ಟ ಎಲ್ಲರಿಗೂ ಮನವಿ ಮಾಡಿದರು.ರಾಜ್ಯದಲ್ಲಿ ಶೀಘ್ರದಲ್ಲೇ ಶೋಧ ಮತ್ತು ಕೂಂಬಿಂಗ್ ಕಾರ್ಯಾಚರಣೆ ನಡೆಸಲಾಗುವುದು ಮತ್ತು ಯಾರಾದರೂ ಯಾವುದೇ ಶಸ್ತ್ರಾಸ್ತ್ರವನ್ನ ಹೊಂದಿರುವುದು ಕಂಡುಬಂದ್ರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದರು.ಇಂಫಾಲ್ನಲ್ಲಿ ಗೃಹ ಸಚಿವರ ಮನವಿಯ ನಂತರ, ಶುಕ್ರವಾರ ಬೆಳಿಗ್ಗೆಯವರೆಗೆ 140ಕ್ಕೂ ಹೆಚ್ಚು ಶಸ್ತ್ರಾಸ್ತ್ರಗಳನ್ನ ಒಪ್ಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.ಮಣಿಪುರದ ಪರಿಸ್ಥಿತಿಯು ಹೆಚ್ಚಿನ ಜಿಲ್ಲೆಗಳಲ್ಲಿ ಬಹುತೇಕ ಶಾಂತಿಯುತವಾಗಿದೆ. ಇನ್ನು ವಿವಿಧ ಭದ್ರತಾ ಸಂಸ್ಥೆಗಳು ಸಂಘಟಿತ ಪ್ರಯತ್ನಗಳನ್ನ ಮಾಡುತ್ತಿರುವುದರಿಂದ ದುಷ್ಕರ್ಮಿಗಳು ಖಾಲಿ ಮನೆಗಳ ಮೇಲೆ ಗುಂಡು ಹಾರಿಸುವ ಅಥವಾ ಬೆಂಕಿ ಹಚ್ಚುವ ಘಟನೆಗಳು ಈಗ ಅಪರೂಪವಾಗುತ್ತಿವೆ ಎಂದು ಅವರು ಹೇಳಿದರು.
