
ಜೂ.11 ರಿಂದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ನೀಡಲಾಗುತ್ತದೆ. ಇದು ನನ್ನ ಹೆಂಡತಿಗೂ ಕೂಡ ಅನ್ವಯವಾಗಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.ಯಾವುದು ಎಸಿ ಬಸ್ ಗಳಿದ್ದಾವೆ ಅವುಗಳನ್ನು ಬಿಟ್ಟು, ರಾಜಹಂಸ ಇರಬಹುದು, ಬೇರೆ ಬಸ್ ಇರಬಹುದು ಆ ಎಲ್ಲಾ ಬಸ್ ಗಳಲ್ಲಿ ಫ್ರೀಯಾಗಿ ಪ್ರಯಾಣ ಮಾಡಬಹುದು.ಆದರೇ ಬೆಂಗಳೂರಿನಿಂದ ತಿರುಪತಿಗೆ, ಹೈದರಾಬಾದ್ ಗೆ ಹೋಗುತ್ತೇವೆ ಎಂದರೆ ಇಲ್ಲ. ರಾಜ್ಯದ ಒಳಗೆ ಮತ್ತು ಕರ್ನಾಟಕವರಿಗೆ ಮಾತ್ರ ಈ ಯೋಜನೆ ಅನ್ವಯವಾಗಲಿದೆ. ಎಸಿ ಮತ್ತು ನಾನ್ ಎಸಿ ಸ್ಲೀಪರ್ ಗಳಲ್ಲಿ ಪ್ರಯಾಣಿಸಲು ಅವಕಾಶವಿಲ್ಲ ಎಂದು ತಿಳಿಸಿದರು.ಎಸಿ ಮತ್ತು ಲಕ್ಸೂರಿ ಬಸ್ ಹೊರತುಪಡಿಸಿ ಮಾಡಿದರೆ ಶೇ.94ರಷ್ಟು ಕವರ್ ಆಗಲಿದೆ. ಇವತ್ತು ಜಾರಿಗೆ ಕೊಡಲು ತೀರ್ಮಾನ ಮಾಡಲಾಗಿದೆ. ಜೂನ್ 11ನೇ ತಾರೀಕು ಬೆಂಗಳೂರಿನಲ್ಲಿ ಲೋಕಾರ್ಪಣೆಗೊಳಿಸಲಾಗುತ್ತಿದೆ. ಜೂನ್ 11ರಿಂದ ಸಾರಿಗೆ ಬಸ್ ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದು. ಬಿಎಂಟಿಸಿ, ಕೆಎಸ್‌ಆರ್ ಟಿಸಿ ಬಸ್ ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದು ಎಂದರು.
