
ಚಿಕ್ಕಮಗಳೂರು,ಈಗಾಗಲೇ ರಾಜ್ಯದ ಹಲವೆಡೆ ಮುಂಗಾರು ಪೂರ್ವ ಮಳೆಯಿಂದ ಅದೆಷ್ಟೋ ಜನ ಮನೆ, ಮಠಗಳನ್ನು ಕಳದುಕೊಂಡು ಬೀದಿಗೆ ಬಂದಿದ್ದರೆ, ಮತ್ತೊಂದೆಡೆ ಕೃಷಿ ಬೆಳೆಗಳನ್ನು ಕಳೆದುಕೊಂಡ ರೈತರು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ಅದೇ ರೀತಿ ಬಿರುಗಾಳಿಗೆ ಮನೆಗಳ ಮೇಲೆ ಬೃಹತ್ ಮರಗಳು ಬಿದ್ದಿದ್ದು, ಎರಡು ಮನೆಗಳು ಸಂಪೂರ್ಣವಾಗಿ ಕುಸಿದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಸುಂಕದಕಟ್ಟೆ ಗ್ರಾಮದಲ್ಲಿ ನಡೆದಿದೆ.ಕರಗುಂದ ಗ್ರಾಮದ ಮಣಿ, ಸುಂಕದಕಟ್ಟೆ ಗ್ರಾಮದ ಪ್ರಭಾಕರ್ ಎಂಬುವವರ ಮನೆಗಳ ಮೇಲೆ ಬೃಹತ್ ಮರಗಳು ಬಿದ್ದ ಪೆರಿಣಾಮ, ಮನೆಯ ಮೇಲ್ಛಾವಣಿ, ಗೋಡೆಗಳು ಸಂಪೂರ್ಣವಾಗಿ ಕುಸಿದುಬಿದ್ದಿವೆ. ಇನ್ನು ಮನೆಯಲ್ಲಿದ್ದ ಲಕ್ಷಾಂತರ ಮೌಲ್ಯದ ವಸ್ತುಗಳು ಹಾನಿಯಾಗಿದ್ದು, ಇದರಿಂದ ಕುಟುಂಬಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಇನ್ನು ಕೂಡ ಬಿರುಗಾಳಿ ಮುಂದುವರೆದಿದ್ದು, ಇದರಿಂದ ಮಲೆನಾಡು ಭಾಗದಲ್ಲಿನ ಜನರು ಆತಂಕಕ್ಕೆ ಒಳಗಾಗಿದ್ದಾರೆ.
