
ಸಕಲೇಶಪುರ. ಇಂದು ಮಲೆನಾಡು ರಕ್ಷಣಾ ಸೇನೆಯ ಸಕಲೇಶಪುರದ ಕೇಂದ್ರ ಕಚೇರಿಯಲ್ಲಿ ಮಡಿಕೇರಿ ಜಿಲ್ಲಾಧ್ಯಕ್ಷರಾಗಿ ರಕ್ಷಿತ್.ಆರ್ ರವರನ್ನು ಆಯ್ಕೆ ಮಾಡಿ ಜವಾಬ್ದಾರಿ ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಮಲೆನಾಡು ರಕ್ಷಣಾ ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಸಾಗರ್ ಜಾನೇಕೆರೆ ರವರು ರಕ್ಷಿತ್ ರವರಿಗೆ ನಾಡು ನುಡಿಯ ಪರವಾಗಿ ಹೋರಾಟ ಮಾಡಿ ಸಂಘಟನೆಯನ್ನು ಉನ್ನತ ಮಟ್ಟದಲ್ಲಿ ಮಾಡಿ ಮಡಿಕೇರಿಯ ಜನ ಮನ ಮುಟ್ಟುವಂತೆ ಬೆಳೆಯಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರು ಸಾಗರ್ ಜಾನೇಕೆರೆ, ರಾಜ್ಯ ಸಂಘಟನಾ ಕಾರ್ಯದರ್ಶಿ ಅಜಿತ್ ಕುಮಾರ್ ಎಂ, ರಾಜ್ಯ ಯುವ ಘಟಕದ ಅಧ್ಯಕ್ಷರು ಕೃತಿ ವರ್ಮ, ತಾಲ್ಲೂಕು ಉಪಾಧ್ಯಕ್ಷ ತೆಜೇಶ್ ಗೌಡ ರವರು, ತಾಲ್ಲೂಕು ಉಸ್ತುವಾರಿ ಚಂದ್ರಶೇಕರ್ ರವರು, ಸುಳ್ಳಕ್ಕಿ ಘಟಕದ ಪದಾಧಿಕಾರಿಗಳು ಮತ್ತು ಮತ್ತು ಮಡಿಕೇರಿ ಜಿಲ್ಲಾಧ್ಯಕ್ಷರಾದ ರಕ್ಷಿತ್.ಆರ್ ರವರ ಸ್ನೇಹಿತರು ಮತ್ತು ಹಿತೈಷಿಗಳು ಹಾಜರಿದ್ದರು.

