
ಸಕಲೇಶಪುರದ ಬಸ್ ನಿಲ್ದಾಣಕ್ಕೆ ಭೇಟಿ ಕೊಟ್ಟ ಶಾಸಕರು .ಸಕಲೇಶಪುರ.ಸಮಸ್ಯೆಗಳ ಆಗರವಾಗಿರುವ ಹೊಸ ಬಸ್ ನಿಲ್ದಾಣಕ್ಕೆ ನೂತನ ಶಾಸಕರಾದ ಸಿಮೆಂಟ್ ಮಂಜುನಾಥ್ ಅವರು ಶನಿವಾರ ದಿಡೀರ್ ಬೇಟಿ ನೀಡಿ ಪರೀಶಲನೆ ನಡೆಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಬಸ್ ನಿಲ್ದಾಣದಲ್ಲಿ ಇರುವ ಚರಂಡಿಗಳನ್ನು ವೀಕ್ಷಿಸಿ ಮೇಲ್ಬಾಗದಲ್ಲಿ ಸ್ಲಾಬ್ ಹಾಕದೆ ಇರುವುದರಿಂದ ಕೂಡಲೇ ಚರಂಡಿ ಮೇಲ್ಬಾಗದಲ್ಲಿ ಸಿಮೆಂಟ್ ಸ್ಲಾಬ್ ಅಳವಡಿಸುವಂತೆ ಹಾಗೂ ಶೌಚಾಲಯಗಳನ್ನು ಶುಚಿಯಾಗಿರಿಸಲು ಸೂಚಿಸಿದರು, , ರಾತ್ರಿ ವೇಳೆಯಲ್ಲಿ ಪುಂಡ ಪೋಕರಿಗಳು ಬಸ್ ನಿಲ್ದಾಣದಲ್ಲಿ ಬಂದು ಪ್ರಯಾಣಿಕರೊಂದಿಗೆ ಅನುಚಿತವಾಗಿ ವರ್ತಿಸುವ ಕಾರಣ ಕೂಡಲೆ ಭದ್ರತೆಯ ವ್ಯವಸ್ಥೆಯ ದೃಷ್ಟಯಿಂದ ರಾತ್ರಿ ವೇಳೆಯಲ್ಲಿ ಪೊಲೀಸ್ ಭದ್ರತೆ ನೀಡುವಂತೆ ಪೋಲಿಸ್ ಇಲಾಖೆಗೆ ಸೂಚಿಸಿದರು, ಹಾಗೂ ಬಸ್ ನಿಲ್ದಾಣದಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವಂತೆ ಸೂಚಿಸಿದರು.
