ಕಛೇರಿಯಲ್ಲಿ ಮರೆತು ಬಿಟ್ಟು ಹೋದ 50000 ಹಣ ಹಾಗೂ ಬೆಲೆಬಾಳುವ ಮೊಬೈಲ್ ಹಿಂದುರುಗಿಸಿದ ಅರಣ್ಯ ಇಲಾಖೆಯ ಡಿ ಗ್ರೂಪ್ ನೌಕರ ಸಕಲೇಶಪುರ ತಾಲ್ಲೂಕಿನ ಬಾಳ್ಳುಪೇಟೆಯ ಬ್ಲಾಸಮ್ ಶಾಲೆ ಶಿಕ್ಷಕಿ ಶನಿವಾರ ಸಕಲೇಶಪುರದ ವಲಯ ಅರಣ್ಯ ಕಛೇರಿಗೆ ಭೇಟಿ ಮಾಡಿ ಹೋಗುವಾಗ ಸಂದರ್ಭದಲ್ಲಿ 50000 ನಗದು,30000 ಬೆಲೆ ಬಾಳುವ ಮೊಬೈಲ್ ಇದ್ದ ಪರ್ಸನ್ನು ಕಛೇರಿಯಲ್ಲಿ ಮರೆತು ಬಿಟ್ಟು ಹೋಗಿದ್ದರು.ಇದನ್ನು ಗಮನಿಸಿದ ಇಲಾಖೆಯ ಡಿ ಗ್ರೂಪ್ ನೌಕರ ಕೃಷ್ಣೇಗೌಡ ಎಂಬುವವರು ಕಳೆದುಕೊಂಡ ಶಿಕ್ಷಕಿ ಪರ್ಸ್ ನ್ನು ವಾರಸುದಾರರಿಗೆ ಒಪ್ಪಿಸಿ ಮಾನವೀಯತೆ ಮೆರೆದಿದ್ದಾರೆ ಕೃಷ್ಣೇಗೌಡರ ಈ ಮಾನವೀಯತೆಗೆ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *