
ಸಕಲೇಶಪುರ:- ಸಕಲೇಶಪುರ ತಾಲೂಕು ಹೆತ್ತೂರು ಹೋಬಳಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು,ಹೆತ್ತೂರು ಹೋಬಳಿ ಘಟಕ ವತಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಹೋಬಳಿಯ ಸುತ್ತ ಮುತ್ತ ಇರುವ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಯ ಕನ್ನಡದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿ ಕೊಳ್ಳಲಾಯಿತು.ಕಾರ್ಯಕ್ರಮದ ಪ್ರಾಸ್ತಾವಿಕ ನುಡಿ ಆಡಿದ ಅತ್ತಿಗನಹಳ್ಳಿ ಸುರೇಶ್ ಮಾತನಾಡಿ ‘ ಹೆತ್ತೂರು ಹೋಬಳಿಯಲ್ಲಿ ಕಸಾಪ ಕಳೆದ ಒಂದು ವರ್ಷದಿಂದ ಕಟ್ಟಿ ಬೆಳೆಸಿದ ರೀತಿ ಹಾಗೂ ಅದು ಈಗಾಗಲೇ ಮಾಡಿರುವ ಕನ್ನಡ ಸಾಹಿತ್ಯ ಪರ ಕೆಲಸಗಳು ಹಾಗೂ ಈಗ ಮಾಡುತ್ತಿರುವ ಕೆಲಸವನ್ನು ಜೊತೆಗೆ ಮುಂದಿನ ದಿನಗ ಳಲ್ಲಿ ಕಸಾಪ ಹೆತ್ತೂರು ಹೋಬಳಿ ಯಲ್ಲಿ ಮಾಡುವ ಕೆಲಸಗಳ ಬಗ್ಗೆ ಕೂಲಂಕುಷವಾಗಿ ವಿವರಿಸಿದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಉಪ ನಿರ್ದೇಶಕರು ಪದವಿ ಪೂರ್ವ ಕಾಲೇಜು ಹಾಸನ ಸಿ.ಎಂ ಮಹಾಲಿಂಗಯ್ಯ ಮಾತನಾಡಿ” ಮೊದಲು ತನ್ನ ವೃತ್ತಿ ಜೀವನ ಹೆತ್ತೂರು ನಿಂದಲೆ ಶುರುಮಾಡಿದ್ದು, ಈ ಊರು ಅತ್ಯಂತ ವಿಶೇಷವಾದ ಗುಣಲಕ್ಷಣವನ್ನು ಹೊಂದಿದೆ. ಕನ್ನಡ ಸಾಹಿತ್ಯ ಪರಿಷತ್ತು ಇತ್ತೀಚಿನ ದಿನಗಳಲ್ಲಿ ಅತ್ಯಂತ ಪ್ರಬಲವಾಗಿದ್ದು.ಕನ್ನಡ ಉಳಿಸಲು ಅನೇಕ ಸಂಘ ಸಂಸ್ಥೆಗಳು ಇದ್ದರೂ ಕೂಡ ಕನ್ನಡ ಭಾಷೆಯನ್ನು ಉಳಿಸಲು ಅತ್ಯಂತ ಪ್ರಬಲವಾದ ಕೆಲಸವನ್ನು ಈ ಸಂಘ ಮಾಡುತಿದ್ದೆ.ಕನ್ನಡ ಶಾಲೆಯಲ್ಲಿ ಮಕ್ಕಳು ಓದುವುದರಿಂದ ಮಕ್ಕಳಲ್ಲಿ ಅತಿ ಹೆಚ್ಚು ಆತ್ಮ ವಿಶ್ವಾಸ ಬೆಳೆಯುತ್ತದೆ.ಹಾಗಾಗಿ ಹೆಚ್ಚು ಮಕ್ಕಳನ್ನು ಕನ್ನಡ ಶಾಲೆಗೆ ಸೇರಿಸುವಂತೆ ಒತ್ತಾಯಿಸಿದರು. ಜೊತೆಗೆ ಇಂಗ್ಲಿಷ್ ವ್ಯಾಮೋಹದಿಂದ ಈ ಭಾಗದಲ್ಲಿ ಕನ್ನಡ ಶಾಲೆಗಳಿಗೆ ಮಕ್ಕಳು ಕಡಿಮೆ ಆಗುತ್ತಿದ್ದಾರೆ.ಎಂದು ಹೇಳಿದರು. ಈ ರೀತಿ ಮಕ್ಕಳನ್ನು ಸನ್ಮಾನಿಸುವುದರೊಂದಿಗೆ ಮಕ್ಕಳಿಗೆ ಮುಂದಿನ ವಿದ್ಯಾಭ್ಯಾಸದಲ್ಲಿ ಇನ್ನೂ ಹೆಚ್ಚು ಅಂಕ ತರುವುದಕ್ಕೆ ಸ್ಪೂರ್ತಿಯಾಗುತ್ತದೆ ಎಂದರು.ನಂತರ ಮಾತನಾಡಿದ ತಾಲೂಕು ಕಸಾಪ ಅಧ್ಯಕ್ಷರದ ಶಾರದಾ ಗುರುಮೂರ್ತಿ ಮಾತನಾಡಿ “ಹತ್ತು ಊರಿನಲ್ಲಿ ಹೆತ್ತೂರು ಸಾಧನೆಯಲ್ಲಿ ಮುಂದೆ ಇದೆ .ಇನ್ನೂ 4 ವರ್ಷದಲ್ಲಿ ಇನ್ನೂ ಹೆಚ್ಚು ಕನ್ನಡ ,ಕನ್ನಡ ಸಾಹಿತ್ಯ ಕಟ್ಟುವ ಕೆಲಸ ಆಗಲಿ .ಮಕ್ಕಳು ಹೆಚ್ಚಿನದಾಗಿ ಕನ್ನಡ ದಿನಪತ್ರಿಕೆಗಳನ್ನು ಓದುವ ಕೆಲಸ ಆಗಲಿ .ಇಂತಹ ಕಾರ್ಯಕರ್ಮಾಗಳು ಇನ್ನೂ ಹೆಚ್ಚು ಹೆಚ್ಚು ಆಗಲಿ ಎಂದು ಎಂದು.ಹೇಳಿದರು.ಮಕ್ಕಳನ್ನು ಪ್ರೋತ್ಸಾಹಿಸುವ ಜೊತೆಗೆ ಅವರಿಗೆ ಮುಂದಿನ ದಿನಗಳಲ್ಲಿ ತಮ್ಮ ವಿದ್ಯಾಭ್ಯಾಸದಲ್ಲಿ ಇನ್ನೂ ಹೆಚ್ಚಿನ ಅಂಕಗಳನ್ನು ತೆಗೆಯುವುದರೊಂದಿಗೆ ಹೋಬಳಿ ಹಾಗೂ ಊರು ತಂದೆ ತಾಯಿಗಳಿಗೆ ಹೆಸರನ್ನು ತಂದುಕೊಡಲು ಪೂರ್ತಿಯಾಗುವಂತಹ ಕೆಲಸವನ್ನು ಹೆತ್ತೂರು ಹೋಬಳಿ ಕಸಾಪ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮಾಡಿದ ಈ ಕಾರ್ಯಕ್ಕೆ ತಾಲೂಕಿನ ಅತ್ಯಂತ ಒಳ್ಳೆಯ ಪ್ರಶಂಸೆ ವ್ಯಕ್ತವಾಯಿತು. ಕಾರ್ಯಕ್ರಮದಲ್ಲಿ ಕನ್ನಡದಲ್ಲಿ ಹೆಚ್ಚು ಅಂಕಗಳನ್ನು ಪಡೆದ ಹೋಬಳಿಯ ಎಸ್ ಎಸ್ ಎಲ್ ಸಿ ಯ 31 ವಿದ್ಯಾರ್ಥಿಗಳು ಹಾಗೂ ದ್ವಿತೀಯ ಪಿಯುಸಿಯ 6 ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು. ಕರ್ನಾಟಕ ಪಬ್ಲಿಕ್ ಶಾಲೆಯ ಮಕ್ಕಳಿಂದ ನಾಡಗೀತೆ ಹಾಗೂ ರೈತ ಗೀತೆ ನೆರೆದಿದ್ದ ಎಲ್ಲರನ್ನೂ ಮೆಚ್ಚಿಗೆ ಪಾತ್ರವಾಯಿತು. ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದ ಹೆತ್ತೂರು ಹೇಮಂತ್ ಕುಮಾರ್ ಗಮನ ಸೆಳೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೋಬಳಿ ಘಟಕದ ಅಧ್ಯಕ್ಷರಾದ ರವಿಕುಮಾರ್, ಹಾಸನ ಜಿಲ್ಲೆಯ ಉಪ ನಿರ್ದೇಶಕರು ಹಾಸನ ಜಿಲ್ಲೆಯ ಸಿಎಂ ಮಹಾಲಿಂಗಯ್ಯ ,ಉದ್ಯಮಿಗಳದ ಜಾಗಟೆ ಶಿವಕುಮಾರ್,ಸಕಲೇಶಪುರ ತಾಲೂಕು ಕಸಾಪ ಅಧ್ಯಕ್ಷರಾದ ಶಾರದಾ ಗುರುಮೂರ್ತಿ,ಬೆಳೆಗಾರ ಸಂಘದ ಅಧ್ಯಕ್ಷರು ಹೆಚ್. ಜಿ ದೇವರಾಜ್ ,ಹೆತ್ತೂರು ಪದವಿ ಪೂರ್ವ ಕಾಲೇಜು ಬೇಟ್ಟದಾಹಳ್ಳಿ ಮಂಜುನಾಥ್,ಹೆತ್ತೂರು ಪಶು ವೈದ್ಯಾಧಿಕಾರಿ ನವೀನ್ . ಬೇಲೂರು ಕಸಾಪ ಕಾರ್ಯದರ್ಶಿಗಳಾದ ಯುವ ಕವಿಗಳು ಹಾಗೂ ಶಿಕ್ಷಕರಾದ ಕುಮಾರಸ್ವಾಮಿ, ಸೇರಿದಂತೆ ಅನೇಕ ವಿದ್ಯಾರ್ಥಿಗಳು ಹಾಗೂ ಪೋಷಕರು ಸೇರಿ ಕಾರ್ಯಕ್ರಮ ಯಶಸ್ವಿ ಗೊಳಿಸಿದರು.


