ಸಕಲೇಶಪುರದಲ್ಲಿ ಕೆ ಡಿ ಪಿ ತ್ರೈ ಮಾಸಿಕ ಸಭೆಯು ಜೂನ್ 7 ಬುಧವಾರ ನಡೆಯಲಿದೆ.ಬುಧವಾರ ಬೆಳಿಗ್ಗೆ 10.30 ಗಂಟೆಗೆ ಸಕಲೇಶಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಲಿರುವ ಸಭೆಯ ಅಧ್ಯಕ್ಷತೆಯನ್ನು ಶಾಸಕ ಸಿಮೆಂಟ್ ಮಂಜು ವಹಿಸಲಿದ್ದಾರೆ.ಮದ್ಯಾಹ್ನ ಬಳಿಕ ಆಡಳಿತಧಿಕಾರಿ ಡಾ. ಪುನೀತ್ ಬಿ ಆರ್ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ಕೂಡಾ ಕರೆಯಲಾಗಿದೆ.ಈ ಸಭೆಯಲ್ಲಿ 2023 ಜನವರಿಯಿಂದ 2023 ಮೇ ವರೆಗಿನ ಪ್ರಗತಿ ವರದಿಯೊಂದಿಗೆ ತಾಲೂಕು ಮಟ್ಟದ ಎಲ್ಲಾ ಅನುಷ್ಠಾನ ಅಧಿಕಾರಿಗಳು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಭಾಗವಹಿಸುವಂತೆ ತಾಲೂಕು ಪಂಚಾಯತ್ ಪ್ರಕಟಣೆ ತಿಳಿಸಿದೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *