ಬೇಲೂರು ತಾಲ್ಲೂಕಿನ ಬಿಕ್ಕೋಡು ಹೋಬಳಿಯ ಅಂಕಿಹಳ್ಳಿ ಗ್ರಾಮದಲ್ಲಿ ಮರದ ದಿಮ್ಮಿ ಮೈಮೇಲೆ ಬಿದ್ದ ಪರಿಣಾಮ ಅವಿವಾಹಿತ ಯುವಕ ಮೃತಪಟ್ಟ ದುರ್ಘಟನೆ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ. ಮೃತ ಮಂಜುನಾಥ್ (27) ಮೂಲತಃ ಅರೇಹಳ್ಳಿ ಹೋಬಳಿಯ ನಾರ್ವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉದುಮನಹಳ್ಳಿಯವರಾಗಿದ್ದು ಎಂದಿನಂತೆ ಇಂದು ಸಹ ಬೆಳಗ್ಗೆ ಟಿಂಬರ್ ಕೆಲಸಕ್ಕೆ ತೆರಳಿದ್ದರು. ಮರದ ದಿಮ್ಮಿಯನ್ನು ಟ್ರಾಕ್ಟರ್ ಗೆ ತುಂಬಿಸುತ್ತಿದ್ದಾಗ ದಿಮ್ಮಿ ಜಾರಿ ಮಂಜುನಾಥ್ ರವರ ಮೈಮೇಲೆ ಅಚಾನಕ್ಕಾಗಿ ಬಿದ್ದು ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಮೃತರಿಗೆ ಇಬ್ಬರು ಅಕ್ಕಂದಿರು, ತಮ್ಮ ಹಾಗೂ ತಂದೆ ತಾಯಿಗಳು ಇದ್ದು ಬಡಕುಟುಂಬವು ದುಡಿಯುವ ಮಗನನ್ನು ಕಳೆದುಕೊಂಡು ದುಃಖದ ಮಡುವಿನಲ್ಲಿದೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *