ಸಕಲೇಶಪುರ:- ಸಕಲೇಶಪುರ ತಾಲೂಕು ಹೆತ್ತೂರು ಹೋಬಳಿಯ ವಳಲಹಳ್ಳಿ ಗ್ರಾಮಪಂಚಾಯಿತಿಯ ಹಿರಿಯೂರು ಸುಗ್ಗಿ ಉತ್ಸವ ಅದ್ದೂರಿಯಾಗಿ ನಡೆಯಿತು.ಹಿರಿಯೂರು ಗ್ರಾಮದ ಶ್ರೀ ಸುಗ್ಗಿ ದೇವಿರಮ್ಮ ,ಕೆಂಡದಮ್ಮ, ಕೆಂಚಮ್ಮ ಮೂರು ದೇವತೆಗಳು ಒಟ್ಟಿಗೆ ಇರುವ ದೇವರ ಸುಗ್ಗಿ ಅತ್ಯಂತ ಸಂಬ್ರಮ ಬಕ್ತಿಪೂರಕವಾಗಿ ಅದ್ದೂರಿಯಾಗಿ ನಡೆಯಿತು.ಈ ಸುಗ್ಗಿ ದೇವರು ಹಾಗೂ ಸುಗ್ಗಿ ಉಸ್ಥವಕ್ಕೆ ತನ್ನದೇ ಆದ ಪುರಾತನ ಇತಿಹಾಸವಿದ್ದು ಈ ದೇವರು ಹಿಂದೆ ಹಳೆ ಸುಗ್ಗಿಕಟ್ಟೆ ಹಿರಿಯೂರು ಗುಡ್ಡದ ಮೇಲೆ ಇತ್ತು.ಕಾಲ ಕಳೆದಂತೆ ಇದನ್ನು ಈ ಗ್ರಾಮದ ಮದ್ಯ ಸುಗ್ಗಿ ಕಟ್ಟೆ ಮಾಡಿ ಸುಗ್ಗಿ ನೆಡೆಸಲಾರಂಬಿಸಿದರು. ಊರಿನ ಎಲ್ಲಾ ಗ್ರಾಮಸ್ಥರು ಒಂದಾಗಿ ತುಂಬಾ ವಿಜೃಂಭಣೆಯಿಂದ ಈ ಸುಗ್ಗಿಯನ್ನು ಆಚರಿಸಿಕೊಂಡು ಬಂದಿದ್ದರೆ,ಬರುತಿದ್ದರೆ.ಈ ಸುಗ್ಗಿ ಹಬ್ಬ ಕೇವಲ ಹಿರಿಯೂರು ಗ್ರಾಮಕ್ಕೆ ಮಾತ್ರ ಸೀಮಿತ ವಾಗಿರದೆ ಸುತ್ತಮುತ್ತಲಿನ ಗ್ರಾಮಗಳಾದ ಜಾತಹಳ್ಳಿ, ಬೊಬ್ಬನಹಳ್ಳಿ ಹಾಗೂ ಬನ್ನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಿಂದ ಬಂದು ದೇವರ ದರ್ಶನ ಪಡೆಯುತ್ತಾರೆ.ಅದರಲ್ಲೂ ಮಕ್ಕಳ ಭಾಗ್ಯ ಇಲ್ಲದವರು ಬಂದು ಎಲ್ಲಿ ಕೆಂಡಾದಮ್ಮನ ಸ್ನಾನವನ್ನು ಮಾಡಿ ಮಕ್ಕಳ ಭಾಗ್ಯದ ಹರಕೆಯನ್ನು ಹೊರುತ್ತಾರೆ.ಹಾಗೂ ದೇವರ ಆಶೀರ್ವಾದಕ್ಕು ಪಾತ್ರರಾಗಿದ್ದಾರೆ.ಒಟ್ಟಾರೆ ಪುರಾತನ ಇತಿಹಾಸ ಸಾರುವ ಈ ಸುಗ್ಗಿಯ ಇದು ಹಿರಿಯೂರಿನಲ್ಲಿ ಅದ್ದೂರಿಯಾಗಿ ನೆಡೆದು ಅಪಾರ ಸಂಕೆಯ ಭಕ್ತಾದಿಗಳಿಗೆ ದೇವರ ಆಶೀರ್ವಾದ ಪಡೆಯುವ ಅವಕಾಶ ಒದಗಿ ಬಂದಿತ್ತು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *