ಆಲೂರು: ಆಲೂರು ತಾಲೂಕು ಪಾಳ್ಯ ಹೋಬಳಿ ಹೆದ್ದುರ್ಗ ಗ್ರಾಮದಲ್ಲಿ ಮನೆಯ ಹಿಂಭಾಗ ಇತ್ತಲಿನಲ್ಲಿ ಕಟ್ಟಿ ಹಾಕಿದ್ದ ಹೂವಣ್ಣರವರ ಮಾಲೀಕತ್ವಕ್ಕೆ ಸೇರಿದ ಹಸುವಿನ ಕಡಸನೊಂದನ್ನು ಸಿಂಗೋಡನಹಳ್ಳಿ ಗ್ರಾಮದ ಮನೋಜ್, ಹೆದ್ದುರ್ಗ ಗ್ರಾಮದ ಕೌಶಿಕ್,ಚಂದನ್,ಮೋಹನ್ ಕುಮಾರ್, ಬಾಳ್ಳುಪೇಟೆಯ ಅಜ್ಗರ್, ಕಣದಹಳ್ಳಿಯ ಪವನ್, ಕೊಂಗವಳ್ಳಿ ಗ್ರಾಮದ ಅಜಿತ್ ಎಂಬುವರು ಕಳ್ಳತನ ಮಾಡಿಕೊಂಡು ಹಸುವನ್ನು ಕತ್ತರಿಸಿ ತಿಂದು ಉಳಿದ ಮಾಂಸವನ್ನು ಮಾರಾಟ ಮಾಡಿರುವ ಘಟನೆ ಹೆದುರ್ಗಾ ಗ್ರಾಮದಲ್ಲಿ ನಡೆದಿದೆ..

ಹಸುವಿನ ಮಾಲೀಕ ಹೂವಣ್ಣ ಎಂಬುವರು ತನ್ನ ಮನೆಯ ಹಿಂಭಾಗ ಕಟ್ಟಿ ಹಾಕಿದ್ದ ಹಸು ಕಳ್ಳತನವಾಗಿದೆ ಎಂದು ಆಲೂರು ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ ಆಲೂರು ಪೊಲೀಸ್ ಠಾಣೆಯ ಎ.ಎಸ್.ಐ ದೇವರಾಜ್ ರವರು ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದಾಗ ಪ್ರಕರಣ ನಡೆದಿರುವುದು ದೃಢಪಟ್ಟಿದೆ ಈ ಸಂಬಂಧ ಆಲೂರು ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ಸಂಖ್ಯೆ 8/2025 ಕಲಂ 303 ಕ್ಲಾಸ್ ಒನ್ ಬಿ.ಎನ್.ಎಸ್ ಷಕ್ಷನ್ 04,07,12 ಕೌಸ್ ಸ್ಲಾಟರ್ ಆಕ್ಟ್ ( ಗೋ ಹತ್ಯೆ ನಿಷೇಧ ಕಾಯ್ದೆ ) ಅನ್ವಯ ಮೇಲ್ಕಂಡ ಏಳು ಜನ ಆರೋಪಿಗಳನ್ನು ಬಂಧಿಸಿ ಅವರ ಮೇಲೆ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ..

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *