ಸಕಲೇಶಪುರ : ಶುಕ್ರವಾರ ಸಂತೆಯ ಶ್ರೀ ಮಂಜುನಾಥೇಶ್ವರ ವಿದ್ಯಾನಿಕೇತನ ಶಾಲೆಯಲ್ಲಿ 25ನೇ ಶಾಲಾ ವಾರ್ಷಿಕೋತ್ಸವ ಸಮಾರಂಭ ಅತ್ಯಂತ ಸಂಭ್ರಮ ಹಾಗೂ ಸಡಗರದಿಂದ ಅದ್ದೂರಿಯಾಗಿ ನೆಡೆಯಿತು.

ಕಾರ್ಯಕ್ರಮವನ್ನ ಶಾಲಾ ಆವರಣದ ಶ್ರೀ ಬಿ.ಎನ್. ಜಯರಾಜು ಸ್ಮಾರಕ ಭವನದಲ್ಲಿ ಶ್ರೀ ಮಂಜುನಾಥೇಶ್ವರ ವಿದ್ಯಾ ಸಂಸ್ಥೆಯ ಕಾರ್ಯದರ್ಶಿಯಾದ ವೈ.ಜೆ ಯೋಗೇಶ್ ಅವರು ಜ್ಯೋತಿ ಬೆಳಗುವ ಮೂಲಕ ಉದ್ಘಾಟನೆ ಮಾಡಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮ ನೆರೆದಿದ್ದ ಪೋಷಕ ವರ್ಗದವರನ್ನು ಹಾಗೂ ಗ್ರಾಮಸ್ಥರನ್ನು ಮನರಂಜನೆಯ ಕಡಲಲ್ಲಿ ತೇಲಿಸಿತ್ತು. ಪ್ರತಿ ಮಕ್ಕಳ ನೃತ್ಯದಲ್ಲಿ ಶಿಕ್ಷಕರು ತುಂಬಾ ದಿನಗಳ ಪರಿಶ್ರಮ ಎದ್ದು ಕಾಣುತ್ತಿತ್ತು. ವೇದಿಕೆಯಲ್ಲಿ ಕರಾಟೆ ಜಲಕನ್ನು ತೋರಿಸಲಾಯಿತು.

ಒಟ್ಟಾರೆ ಶ್ರೀ ಮಂಜುನಾಥೇಶ್ವರ ವಿದ್ಯಾನಿಕೇತನದ ಶಾಲಾ ಮಕ್ಕಳ ವಾರ್ಷಿಕೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದಿದ್ದವರನ್ನು ಹಾಗೂ ಪೋಷಕ ವರ್ಗದವರನ್ನು ಖುಷಿಯ ಜೊತೆಗೆ ಮನರಂಜನೆಯ ಕಡಲಲ್ಲಿ ತೇಲಿಸಿತ್ತು .

ವೇದಿಕೆಯಲ್ಲಿ ಕ್ಷೇತ್ರ ಸಂಪನ್ಮೂಲ ಅಧಿಕಾರಿಗಳಾದ ಮಲ್ಲೇಶ್, ಉಮಾ ಜಯರಾಜು ಕಾಫಿ ಬೆಳೆಗಾರರಾದ ಬಿ.ಡಿ ಪ್ರಭುಲಿಂಗೇಶ್, ಸಂಸ್ಥೆಯ ಅಧ್ಯಕ್ಷರಾದ ಭಾಸ್ಕ‌ರ್ ಎಸ್.ಎಂ,ಕಾರ್ಯದರ್ಶಿ ವೈ.ಜೆ.ಯೋಗೀಶ್,ಖಜಾಂಜಿ ರೇಣುಕ ಬಿ.ಆರ್,ನಿರ್ದೇಶಕರುಗಳಾದ ಚಂದ್ರಕಲಾಪ್ರಕಾಶ್,ಸಿಂಧೂ ನಿರಂಜನ್,ಬಿ.ಜೆ.ಜಯಲಕ್ಷ್ಮೀ ಗಿರೀಶ್ ಇದ್ದರು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *