
ಹಾಸನ : ತ್ರಿವಿದ ದಾಸೋಹೀಗಳು ನಡೆದಾಡುವ ದೇವರು ಕಾಯಕಯೋಗಿಗಳು ಶತಯುಷಿಯಾಗಿದ್ದ ಶ್ರೀ ಶಿವಕುಮಾರ ಸ್ವಾಮೀಜಿ ರವರ 6 ನೇ ವರ್ಷದ ಪುಣ್ಯರಾಧನೆ ಅಂಗವಾಗಿ ಹಾಸನ ಗಂಧದ ಕೋಟೆಯ ಸರ್ಕಲ್ ನ ಆಟೋ ಮಾಲಿಕರ ಹಾಗು ಚಾಲಕರ ಸಂಘದ ವತಿಯಿಂದ ದಿನಾಂಕ 21-1-2025 ರಂದು ಅನ್ನ ದಾಸೋಹ, ರಕ್ತದಾನ ಶಿಬಿರ , ಮತ್ತು ಆರೋಗ್ಯ ಶಿಬಿರ ಏರ್ಪಡಿಸಿರುವುದು ಉತ್ತಮ ಕೆಲಸವಾಗಿದೆ ಎಂದು ಸಂಗಮೇಶ್ವರ ಸ್ವಾಮೀಜಿ ಮಠಾದಿಸರು,ಜವನಹಳ್ಳಿ ಮಠ ತಿಳಿಸಿದರು.
ನಾವು ಡಾ ಶಿವಕುಮಾರ ಸ್ವಾಮೀಜಿರವರ ಅದರ್ಶ ಗುಣಗಳನ್ನು, ಅವರ ಸೇವಾಕಾರ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೋಳ್ಳಬೇಕೆಂದರು. ನಾಡಿನ ಪುಣ್ಯ ಭೂಮಿಯಲ್ಲಿ ಆನೇಕ ಸಂತರು, ಶರಣರು, ತಪಸ್ವಗಳು, ಸಿದ್ದಪುರಷರು ತಮ್ಮ ಕಾಯಕದ ಮೂಲಕ ಜನಸಾಮಾನಸದಲ್ಲಿ ಚೀರಸ್ಥಾಯಿಯಾಗಿ ಬೆಳಗುತ್ತಿದ್ದಾರೆ ಅದರೆ ಶಿವಕುಮಾರ ಸ್ವಾಮೀಜಿ ಬಡ ಮಕ್ಕಳಿಗೆ ಅನ್ನ ದಾಸೋಹ, ಅಕ್ಷರ, ಅಶ್ರಯ, ಕೊಟ್ಟು ಅವರ ಜೀವನದ ಬದುಕು ಪಾವನಗೊಳಿಸಿರುವ ಶಿವ ಕುಮಾರ ಸ್ವಾಮೀಜಿವರ ಜೀವನದ ಅದರ್ಶಗಳು. ಪ್ರತಿಯೋಬ್ಬರಿಗೂ ಇವರ ನಡೆ ನುಡಿ ನಮಗೆ ಮಾರ್ಗದರ್ಶನವಾಗಿದೆ.
ಇಂದು ಶ್ರೀ ಸಿದ್ದಗಂಗಾ ಮಠ ಸೇರಿದಂತೆ ನಾಡಿನ ಎಲ್ಲಾ ಕಡೆ ಪೂಜೆ ಪುರಸ್ಕಾರಗಳು ಅನ್ನ ದಾಸೋಹ ಆರೋಗ್ಯ ಶಿಬಿರ. ರಕ್ತ ದಾನ ಮಾಡುವ ಮೂಲಕ ಶ್ರೀಗಳ ಪುಣ್ಯರಾಧನೆ ಕಾರ್ಯಕ್ರಮ ನಡೆಸುತ್ತೀದ್ದಾರೆ ಎಂದರು.
ಇವರಂತೆ ಅಧೀಚುಂಚನಗೀರಿ ಸ್ವಾಮೀಜಿ ರವರ ಪುಣ್ಯರಾದನೆ ಇದೆ ತಿಂಗಳು ನೆಡೆದಿದೆ ಎಂದರು.
ಕಾರ್ಯಕ್ರಮದ ಸಾನಿಧ್ಯವನ್ನು ಅರಕಲಗೂಡು ಚಿಲುಮೆ ಮಠದ ಮಠಾಧೀಶರಾದ ಜಯದೇವ ಸ್ವಾಮೀಜಿ ವಹಿಸಿದ್ದರು.
ಕಾರ್ಯಕ್ರಮ ಅಯೋಜಕರಾದ ಶೇಖರ್, ಮೋಹನ್, ಒಳಗೊಂಡಂತೆ ಗಂಧದ ಕೋಟೆ ಆಟೋ ಚಾಲಕರ, ಮಾಲಿಕರ ಸಂಘದ ಪಧಾದಿಕಾರಿಗಳು ಸದಸ್ಯರು ಪಾಲ್ಗೊಂಡಿದ್ದರು
ಈ ಪೂಜಾ ಕಾರ್ಯಕ್ರಮದಲ್ಲಿ. ಹಿರಿಯ ಅಡ್ವೋಕೆಟ್ ಅರ್ ಸಿ ಚನ್ನಬಸವಯ್ಯ. ಮಾಜಿ ನಗರಸಭಾ ಸಧಸ್ಯರಾದ ಚಂದ್ರು, ಹಾಸನ ತಾಲ್ಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷರಾದ ಕಟ್ಟಾಯ ಶಿವಕುಮಾರ್. ಪ್ರದಾನ ಕಾರ್ಯದರ್ಶಿ ಹೆಚ್ ವಿ ಹೇಮಂತ್ ಕುಮಾರ್, ಹಾಸನ ವೀರಶೈವ ಲಿಂಗಾಯತ ಜಿಲ್ಲಾ ಸಂಘದ ನಿರ್ಧೇಶಕರಾದ ಬಾಳ್ಳು ನಾಗೇಶ್, ಬಿ ವಿ ಲತೇಶ್, ವೀರಶೈವ ಮಹಾಸಭಾದ ಜೀಲ್ಲಾ ನಿರ್ಧೆಕರಾದ ವಿಜಯಕುಮಾರ್, ಅರಕಲಗೂಡು ಚಂದ್ರಶೇಖರ್, ಜಿಲ್ಲಾ ವೀಷ್ಣುವರ್ಧನ ಸಂಘದ ಅಧ್ಯಕ್ಷರಾದ ಮಹತೇಶ್. ವಿಜಯಕುಮಾರ್. ದೇವಿರಯ್ಯ, ಎಂ ವಿ ದೆವರಾಜು. ಬಿದರಕೇರೆ ದೇವರಾಜ್. ಯು ಎಸ್ ಮಲ್ಲಿಕಾರ್ಜುನ. ಯು ಎಸ್ ಬಸವರಾಜ್. ಸೋಮಶೇಖರ್. ಮುಂತಾದವರು ಪಾಲುಗ್ಗೋಂಡಿದ್ದರು. ಪೂಜೆಯನ್ನು ಶ್ರೀ ಸಿದ್ದೇಶ್ವರ ದೇವಸ್ಥಾನದ ಅರ್ಚಕರು ನೆರವೇರಿಸಿದರು ಸಾವೀರಾರು ಜನರು ಪ್ರಸಾದ ಸ್ವೀಕರಿಸಿದರು, ಹಾಗೂ ಹಲವಾರು ಜನರು ರಕ್ತದಾನ ಮಾಡಿದರು. ಹಾಗೂ ಆರೋಗ್ಯ ಶಿಭೀರದ ಪ್ರಯೋಜನ ಪಡೆದರು.



