ಸಕಲೇಶಪುರ:- ಹೆತ್ತೂರು ಹೋಬಳಿಯ ವಳಲಹಳ್ಳಿ ಗ್ರಾಮ ಪಂಚಾಯಿತಿಯ ಬೆಳೆಗಾರ ಸಂಘದ 2ನೇ ಮಾಸಿಕ ಸಭೆ ಅಧ್ಯಕ್ಷರಾದ ಎಂ. ಕೆ ದರ್ಶನ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ವಳಲಹಳ್ಳಿ ಬೆಳೆಗಾರರ ಸಂಘದ ಅಧ್ಯಕ್ಷರಾದ ಎಂ. ಕೆ ದರ್ಶನ್ ” ಇತ್ತೀಚಿನ ದಿನಗಳಲ್ಲಿ ಕಾಫಿ ಕೊಯ್ಲಿಗೆ ಪಿಕ್ ಅಪ್ ವಾಹನದಲ್ಲಿ ಜನರನ್ನು ಕರೆದುಕೊಂಡು ಬರುವಾಗ ಪೊಲೀಸ್ ಸಿಬ್ಬಂದಿಗಳು ದಂಡ ಹಾಕುತ್ತಿದ್ದಾರೆ. ಬೆಳೆಗಾರರು ಕಾಫಿ ಕುಯ್ಲಿಗೆ ಎರಡರಿಂದ ಮೂರು ಜನರನ್ನು ಕರೆದುಕೊಂಡು ಬಂದರೆ ನಷ್ಟ ಅನುಭವಿಸಬೇಕಾಗುತ್ತದೆ.

ಈ ಸಮಯದಲ್ಲಿ ನಿಮ್ಮ ಪೊಲೀಸ್ ಸಿಬ್ಬಂದಿಗಳು ರೈತರಿಗೆ ಸ್ಪಂದಿಸುವ ಆಗ್ಬೇಕು. ಎಂದು ಒತ್ತಾಯಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಗ್ರಾಮಪಂಚಾಯಿತಿ ಅಧ್ಯಕ್ಷರಾದ ರೂಪ ಮಾತನಾಡುತ್ತಾ ” ವಳಲಹಳ್ಳಿ ಗ್ರಾಮಪಂಚಾಯಿತಿ ಬೆಳೆಗಾರರ ಸಂಘ ಮುಂದೆ ಇನ್ನಷ್ಟು ಬಲಿಷ್ಠವಾಗಿಯೂ, ಸದೃಢವಾಗಿ ಬೆಳೆಯುವ ಮೂಲಕ ಬೆಳೆಗಾರರಿಗೆ ಸಹಾಯವಾಗುವ ನಿಟ್ಟಿನಲ್ಲಿ ಉತ್ತಮ ಕೆಲಸ ಮಾಡಲಿ. ” ಎಂದು ಹೇಳಿದರು.ನಂತರ ಮಾಸಿಕ ಸಭೆಯಲ್ಲಿ ಸಾಂಬಾರ ಮಂಡಳಿ ಸಕಲೇಶಪುರ ವತಿಯಿಂದ ಕಾಳು ಮೆಣಸು ಬೆಳೆಯುವ ಗುಣಮಟ್ಟ ಸುಧಾರಿತ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಸಾಂಬಾರು ಮಂಡಳಿ ಸಕಲೇಶಪುರ ಹಿರಿಯ ಕ್ಷೇತ್ರ ಅಧಿಕಾರಿಗಳಾದ ಎಸ್ ಕುಮಾರ್ ಭಾಗವಹಿಸಿ ಕಾಳು ಮೆಣಸಿನ ಬೇಸಾಯದಲ್ಲಿ ತಾಂತ್ರಿಕ ವಿಚಾರಗೋಷ್ಠಿ ನಡೆಸಿಕೊಟ್ಟರು .

ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಗಾರರು ಕಾರ್ಯಕ್ರಮದಲ್ಲಿ ಭಾಗವಹಿಸಿ ತಜ್ಞರೊಂದಿಗೆ ಕಾಳುಮೆಣಸು ಬೆಳೆಗೆ ಪಟ್ಟಂತೆ ಅನೇಕ ಸಮಸ್ಯೆಗಳನ್ನು ಚರ್ಚಿಸಿ ಪರಿಹಾರ ಕೊಂಡುಕೊಂಡರು.

ಕಾರ್ಯಕ್ರಮದಲ್ಲಿ ಸಕಲೇಶಪುರ ಸಾಂಬಾರ ಮಂಡಳಿ ಕ್ಷೇತ್ರಾಧಿಕಾರಿಗಳ ಬಿ.ಕೆ. ರಮೇಶ, ಗೌರವ ಅಧ್ಯಕ್ಷರಾದ ವಿ. ಬಿ ರಮೇಶ್,ಉಪಾಧ್ಯಕ್ಷರಾದ ರುದ್ರೇಶ್,ಖಜಾಂಚಿ ಹಿರಿದನಹಳ್ಳಿ ಹೂವಣ್ಣ ಗೌಡ,ಕಾರ್ಯದರ್ಶಿ ಅರುಣ್ ಗೌಡ ಕರಡಿಗಾಲ,ವಳಲಹಳ್ಳಿ ಪ್ರಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ವಸಂತ್ ಸೇರಿದಂತೆ ಗ್ರಾಮ ಪಂಚಾಯಿತಿ ಬೆಳೆಗಾರರ ಸಂಘದ ಎಲ್ಲಾ ನಿರ್ದೇಶಕರು ಹಾಗೂ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ 2ನೇ ಮಾಸಿಕ ಸಭೆಯನ್ನು ಯಶಸ್ವಿಗೊಳಿಸಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *