ಸಕಲೇಶಪುರ : ಹಿಂದೂಗಳ ಮೂರು ಕೋಟಿ ದೇವತೆಗಳ ಆವಾಸ ಸ್ಥಾನವಾಗಿರುವ ಗೋಮಾತೆಯ ಕೆಚ್ಚಲುಗಳನ್ನು ಕತ್ತರಿಸಿ ವಿಕೃತಿ ಮೆರೆದಿರುವ ಚಾಮರಾಜಪೇಟೆಯ ಘಟನೆಯು ಕೋಟ್ಯಾಂತರ ಭಾರತೀಯರ ಭಾವನೆಗಳಿಗೆ ದಕ್ಕೆಯಾಗಿದ್ದು, ಕರುಳು ಹಿಂಡುವ ಇಂತಹ ದುಷ್ಕೃತ್ಯಗಳು ಇನ್ನು ಮುಂದೆ ಮರುಕಳಿಸದಂತೆ ತಡೆಯುವುದು ಹಾಗೂ ದುಷ್ಕರ್ಮಿಗಳಿಗೆ ಕಠಿಣವಾದ ಶಿಕ್ಷೆ ಯಾಗಬೇಕು ಎಂದು ಸಕಲೇಶಪುರ ಡಿ.ವೈ.ಎಸ್.ಪಿ.ಯವರ ಮೂಲಕ ರಾಜ್ಯಪಾಲರಿಗೆ ಇಂದು ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಭಜರಂಗದಳದ ಜಿಲ್ಲಾ ಉಪಾಧ್ಯಕ್ಷರಾದ ವಿಜಯಕುಮಾರ್, ಜಿಲ್ಲಾ ಕಾರ್ಯದರ್ಶಿ ಹರೀಶ್ ಕರಡಿಗಾಲ, ತಾಲೂಕು ಅಧ್ಯಕ್ಷರಾದ ಬಿಡಹಳ್ಳಿ ಬಾಲು, ಕಾರ್ಯದರ್ಶಿ ಲೋಹಿತ್, ಸಹ ಕಾರ್ಯದರ್ಶಿ ರವಿ ಹಾರ್ಲೆ ಕೂಡಿಗೆ, ಹೆತ್ತೂರು ಘಟಕದ ಅಧ್ಯಕ್ಷರಾದ ರವಿತೇಜ ಹಾಗೂ ಕಾರ್ಯದರ್ಶಿ ಸುರೇಶ್, ಬಿಜೆಪಿ ಮಹಿಳಾ ಮುಖಂಡರಾದ ನೇತ್ರ ಸುರೇಶ್ ಮತ್ತು ಆಟೋ ರವಿ ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *