ಹಾಸನ: ಕರಾಟೆ ಕ್ರೀಡಾ ಕ್ಷೇತ್ರದ ಸಾಧನೆ ಪರಿಗಣಿಸಿ ಈ ಬಾರಿಯ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾಡಳಿತದ ವತಿಯಿಂದ ಕರಾಟೆ‌ಪಟು ಆರ್ಯನ್ ಬಿ.ವಿ. ಅವರನ್ನು ಆಯ್ಕೆ ಮಾಡಿ ಸನ್ಮಾನಿಸುತ್ತಿದೆ.

ಯುನೈಟೆಡ್ ಅಕಾಡೆಮಿ ಶಾಲೆಯಲ್ಲಿ 7 ನೇ‌ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿ ಆರ್ಯನ್‌ ಬಿ.ವಿ. ವೈಚಾರಿಕ ಪತ್ರಿಕೆ ಸಂಪಾದಕ ವೆಂಕಟೇಶ್ ‌ಬ್ಯಾಕರವಳ್ಳಿ, ಸೋನಿ‌‌‌ ದಂಪತಿಗಳ ಪುತ್ರ. ರಾಜ್ಯ ಹಾಗೂ ಅಂತರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಭಾಗವಹಿಸಿ ಸಾಧನೆ ಮಾಡಿದ್ದಾನೆ

ಕಳೆದ‌ ಐದಾರು ವರ್ಷಗಳಿಂದ ಈತ‌ ಹಾಸನದ‌ ‌ಮಹರಾಜ ಪಾರ್ಕಿನ ಅಮೆಚೂರ್ ‌ಬಾಡಿಬಿಲ್ಡರ್ ಸಂಸ್ಥೆಯ ತರಬೇತುದಾರ‌‌ ಮಹದೇವ ಅವರ ಮಾರ್ಗದರ್ಶನದಲ್ಲಿ ಕರಾಟೆ ತರಬೇತಿ ಪಡೆಯುತ್ತಿದ್ದಾನೆ. ವ್ಯಾಸಂಗದ ಜೊತೆಗೆ ಕರಾಟೆ ಕಲೆಯನ್ನು‌ ಕರಗತ‌ ಮಾಡಿಕೊಂಡಿದ್ದಾನೆ.

ಇದಲ್ಲದೆ‌ ಮಲ್ಲಕಂಬವನ್ನು ಅಭ್ಯಾಸ ಮಾಡಿಕೊಂಡಿದ್ದು ಕಳೆದ ಭಾರಿ ರಾಜ್ಯಶಾಲಾಮಟ್ಟದ ಪಂದ್ಯಾವಳಿ‌ಭಾಗಹಿಸಿ ‌ ಬೆಳ್ಳಿ‌ಪದಕ ಪಡೆದಿದ್ದಾನೆ.

ಇದುವರೆಗೂ 15 ಕ್ಕೂ ಹೆಚ್ಚು ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸಿ ಕತಾ ಹಾಗೂ ಕುಮಿತೆಯಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ‌ ತನ್ನದಾಗಿಸಿಕೊಂಡಿದ್ದಾನೆ. ಮೈಸೂರು ಜಿಲ್ಲೆಯಲ್ಲಿ ನಡೆದ ಐಸಿಎಸ್ ಇ ರಾಷ್ಟ್ರಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸಿ ಚಿನ್ನದ ಪದಕ ಪಡೆದುಕೊಂಡಿದ್ದಾನೆ. ಕಳೆದ ವರ್ಷ ಶಿಕ್ಷಣ ಇಲಾಖೆ ಶಿಮೊಗ್ಗದಲ್ಲಿ ನಡೆದ ರಾಜ್ಯಮಟ್ಟದ ಕರಾಟೆ ಪಂದ್ಯಾವಳಿ ಭಾಗವಹಿಸಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದುಕೊಂಡು ಬೆಳ್ಳಿಯ ಪದಕ ಪಡೆದುಕೊಂಡು ಹಾಸನ ಜಿಲ್ಲೆಗೆ‌ ಕೀರ್ತಿ ತಂದಿದ್ದಾನೆ.

ಇದಲ್ಲದೆ .ಕೇರಳಾ ತಮಿಳುನಾಡು,ಗೋವಾ ಸೇರಿದಂತೆ ಇನ್ನಿತರ ಕಡೆಗಳಲ್ಲಿ ನಡೆದ ಪಂದ್ಯಾವಳಿಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನಗಳನ್ನು ಪಡೆದುಕೊಂಡಿದ್ದಾನೆ .

2025 ರ ಜನವರಿ 18,19 ರಂದು ‌ಕೇರಳದಲ್ಲಿ ನಡೆದು‌ ಅಂತರಾಷ್ಟ್ರೀಯಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದುಕೊಂಡು ಜಿಲ್ಲೆ, ರಾಜ್ಯಕ್ಕೆ ಕೀರ್ತಿ ತಂದಿದ್ದಾನೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *