
ಸಕಲೇಶಪುರ : 76 ನೇ ಗಣರಾಜ್ಯೋತ್ಸವದ ಅಂಗವಾಗಿ ಇಂದು ಪಟ್ಟಣದ ತಾಲೂಕು ಆಡಳಿತ ಸೌದದ ಡಾಕ್ಟರ್ ಬಿ. ಆರ್. ಅಂಬೇಡ್ಕರ್ ಪ್ರತಿಮೆ ಮುಂಭಾಗ ಮಾನವ ಬಂಧುತ್ವ ವೇದಿಕೆ ಸಕಲೇಶಪುರ ತಾಲೂಕು ಘಟಕದ ವತಿಯಿಂದ ಸಂವಿಧಾನ ಪೀಠಿಕೆಯನ್ನು ಸಾಮೂಹಿಕವಾಗಿ ಓದುವ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಹಿರಿಯಾ ದಲಿತ ಮುಖಂಡ ಕೆ.ಬಿ. ಬೈರಪ್ಪ ಮಾಸ್ಟರ್ ಮಾತನಾಡಿ ಸಂವಿಧಾನ ಅಪಾಯದ ಹಂಚಿನಲ್ಲಿದ್ದು ಸಂವಿಧಾನವನ್ನು ಬದಲಾಯಿಸುವ ಕೂಗುಗಳು ಆಗಾಗ ಕೇಳಿ ಬರುತ್ತಿದ್ದು ಸಂವಿಧಾನದ ಉಳಿವಿಗಾಗಿ ನಾವೆಲ್ಲರೂ ಜಾಗೃತರಾಗಬೇಕಾಗಿದೆ ಎಂದರು.
ಮಾನವ ಬಂಧುತ್ವ ವೇದಿಕೆಯ ತಾಲೂಕು ಸಂಚಾಲಕ ಕಾಡಪ್ಪ ಮಾತನಾಡಿ ಮಾನವ ಬಂಧುತ್ವ ವೇದಿಕೆ ರಾಜ್ಯಾದ್ಯಂತ ಬುದ್ಧ, ಬಸವ, ಅಂಬೇಡ್ಕರ್ ತತ್ವ, ಸಿದ್ದಾಂತ, ಆದರ್ಶ ಮತ್ತು ಆಶಯಗಳನ್ನು ಯುವ ಸಮೂಹಕ್ಕೆ ತಿಳಿಸುವ ಮೂಲಕ ಜಾಗೃತಿ ಮೂಡಿಸುತ್ತಿದ್ದು ತಾವೆಲ್ಲರೂ ಮೌಢ್ಯ ಮುಕ್ತ ಸಮಾಜ ನಿರ್ಮಾಣಕ್ಕಾಗಿ ನಮ್ಮೊಂದಿಗೆ ಕೈ ಜೋಡಿಸಬೇಕು ಎಂದರು
ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕ ಜೈ ಭೀಮ್ ಮಂಜು ಮಾತನಾಡಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ದೇಶದ ಶೋಷಿತರ, ದಮನಕ್ಕೆ ಒಳಗಾದವರ, ಮಹಿಳೆಯರ ಪರವಾದ ಸಮಾನತೆ,ಸ್ವಾಭಿಮಾನ,ವ್ಯಕ್ತಿಗೌರವ, ಅಭಿವ್ಯಕ್ತಿ ಸ್ವಾತಂತ್ರ್ಯ ,ಭ್ರಾತೃತ್ವಭಾವನೆಯ ಸಂದೇಶವನ್ನು ಸಾರುವ ವಿಶ್ವದಲ್ಲೇ ಅತ್ಯುನ್ನತವಾದ ಸಂವಿಧಾನವನ್ನು ನಾವೆಲ್ಲರೂ ಗೌರವಿಸುವ ಜೊತೆಗೆ ಸಂವಿಧಾನದ ರಕ್ಷಣೆಗಾಗಿ ನಾವೆಲ್ಲ ರಕ್ಷಾಕವಚದಂತೆ ಕಾಪಾಡಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಆನೆಮಹಲ್ ಗ್ರಾಮ ಪಂಚಾಯಿತಿ ಮಾಜಿ ಅದ್ಯಕ್ಷ ತಿಮ್ಮಯ್ಯ, ಆದಿವಾಸಿ ಮತ್ತು ಅಸಲರ ಸಂಘದ ಜಿಲ್ಲಾ ಮುಖಂಡ ನವೀನ್ ಸದಾ ಮಾತನಾಡಿದರು.
ಈ ಸಂದರ್ಭದಲ್ಲಿ ಎಸ್.ಬಿ.ಮಂಜುನಾಥ್, ರುದ್ರೇಶ್ ವಳಲಹಳ್ಳಿ, ದೇವರಾಜು ಆಚಂಗಿ, ದ್ಯಾವಪ್ಪ, ಹರೀಶ್ ಹಾಲೆಬೇಲೂರು, ಕುಮಾರ್ ಕೌಡಳ್ಳಿ, ಮಲ್ಲೇಶ್ ಕೃಷ್ಣಾಪುರ, ಬಿ.ಬಿ.ಮಂಜುನಾಥ್, ವಿರೂಪಾಕ್ಷ ಸತ್ತಿಗಾಲ್, ಆಟೋ ರಮೇಶ್, ಪ್ರಕಾಶ್ ಕಲ್ಗಣೆ, ಮಂಜಯ್ಯ ಗುಡಾಣಕೆರೆ, ಕುಮಾರಸ್ವಾಮಿ ಕೌಡಳ್ಳಿ,ಇತರರು ಇದ್ದರು.


