
ಹಾಸನ : ಮಲೆನಾಡು ಇಂಜಿನಿಯರಿಂಗ್ ಕಾಲೇಜಿನಲ್ಲಿ ದಿನಾಂಕ 26-1-2025 ರಂದು 76 ನೇ ಗಣರಾಜ್ಯೋತ್ಸವ ಕಾರ್ಯಕ್ರಮ ಅಯೋಜೀಸಲಾಗಿತ್ತು
ಧ್ವಜಾರೋಹಣ ನೇರವೇರಿಸಿ ಮಾತಾನಾಡಿದ ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಚೌಡುವಳ್ಳಿ ಜಗಧೀಶ್ ರವರು ಭಾರತವು ಪ್ರಜಾಪ್ರಭುತ್ವ ಸಾರ್ವಬೌಮ ದೇಶವಾಗಿದೆ ಎಲ್ಲರೂ ಸಮಾನತೆಯಿಂದ ಬದುಕುವಂತ ಸರ್ವರಿಗೂ ಒಂದೆ ಕಾನೂನು, ಮೇಲು ಕೀಳು ಎಂಬ ಭಾವನೆ ಇಲ್ಲದೆ ಸಮಾನವಾದ ಹಕ್ಕುನ್ನು ಪಡೆದಿದ್ದೇವೆ,ಎಂದರು
1950 ರ ಜನವರಿ 26 ರಂದು ದೇಶದ ಮೊದಲ ರಾಷ್ಟ್ರಪತಿ ಡಾ ರಾಜೇಂದ್ರ ಪ್ರಸಾದ್ ರವರು ದೇಹಲಿಯ ಕೇಂಪು ಕೋಟೆಯಲ್ಲಿ ಧ್ವಜಾರೋಹಣ ಮಾಡಿ ಭಾರತವನ್ನು ಪೂರ್ಣ ಪ್ರಮಾಣದ ಗಣರಾಜ್ಯ ವೆಂದು ಘೋಷೀಸಿದರು.
ಈ ಬಾರಿ ಸುವರ್ಣ ಭಾರತ ಪರಂಪರೆ ಮತ್ತು ಅಭಿವೃದ್ಧಿ ಎಂದು ಘೋಷಿಸಲಾಗಿದ್ದು ಇದು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಅದರ ನಿರಂತರ ಪ್ರಗತಿಯ ಪ್ರಮಾಣವನ್ನು ಪ್ರತಿಭಿಂಬಿಸತ್ತದೆ ಎಂದರು.ಅಂಭೇಡ್ಕರ್ ರವರ ಸಂವಿದಾನವನ್ನು ನಾವು ಗೌರವಿಸಬೇಕು ಎಂದರು.
ಕಾಲೇಜೀನ ಪ್ರಾಂಶುಪಾಲರಾದ ಡಾ ಎ ಜೆ ಕೃಷ್ಣಯ್ಯ ಮಾತಾನಾಡಿ ಡಾ ಅಂಭೇಡ್ಕರ್ ಅವರು ರಚೀಸಿದ ಸಂವಿಧಾನ ಇವತ್ತು ಜಾತಿ ಮತಭೇದ ವಿಲ್ಲದೆಎಲ್ಲವನ್ನು ಮೀರಿ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳನ್ನು ಕಲ್ಪಿಸಿಕೊಟ್ಟಿದ್ದು ಸಂವೀದಾನ ಶಕ್ತಿ ಎಂದು ತಿಳಿಸಿದರು.
ಸಂವಿಧಾನವನ್ನು ಎಲ್ಲರು ಗೌರವಿಸಿ ಪಾಲಿಸುವ ಮೂಲಕ ಸಮಾನತೆಗೆ ದಾರಿದೀಪವಾಗಿದೆ ಎಂದು ತಿಳಿಸಿದರು.
ಇಂದು ದೇಶದ್ಯಾಂತ ಗಣರಾಜ್ಯತ್ಸವ ಆಚರಣೆ ಮಾಡುತ್ತೀದ್ದು ತಮ್ಮೇಲ್ಲರಿಗೂ 76 ನೇ ಗಣರಾಜ್ಯತ್ಸವದ ಶುಭಾಶಯಗಳು ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ನಿರ್ಧೆಶಕರಾದ ನಾಗರಾಜ್ ಜ್ಯೇನ್ ಹಾಗೂ ಕಾಲೇಜೀನ ದೖಯಿಕ ನಿರ್ದೇಶರಾದ ಸೋಮಶೇಖರ್ ಹಾಗೂ ನೌಕರರ ಕಲ್ಯಾಣ ಸಂಘದ ಮತ್ತು ಸ್ಟಾಪ್ ಕ್ಲಬ್ ನ ಕಾರ್ಯದರ್ಶಿಗಳು ಮತ್ತು 2025 ನೇ ಸಾಲಿನಲ್ಲಿ ನಿವೃತ್ತ ರಾಗಲಿರುವ ನೌಕರರು ವೇದೀಕೆಯಲ್ಲಿದ್ದರು.


