
ಸಕಲೇಶಪುರ : ಫೆಬ್ರವರಿ 3 ರಂದು ಸಕಲೇಶಪುರ ತಾಲೂಕು ಹಾನಬಾಳು ಹೋಬಳಿ ದೇವಾಲದಕೆರೆ ಗ್ರಾಮದಲ್ಲಿರುವ ಹೊಂಬಾಳೆ ಸುತ್ತಮುತ್ತ ಕಾಡುಕೋಣ ವೊಂದು ಓಡಾಡಿ ಜನ ಭಯಭೀತರಾಗಿರುವ ಬಗ್ಗೆ ಸಕಲೇಶಪುರ ಸ್ಥಳೀಯ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗಿದ್ದು, ಈ ದಿನ ಸಕಲೇಶಪುರ ವಲಯ ಅರಣ್ಯಧಿಕಾರಿಗಳಾದ ಹೇಮಂತ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ, ಸ್ಥಳ ಪರಿಶೀಲಿಸಿ,ಕಾಫಿ ಕುಯ್ಲು ಸಮಯವಾದ್ದರಿಂದ ಸಾರ್ವಜನಿಕರಿಗೆ ಕಾಡುಕೋಣದಿಂದ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಸ್ಥಳದಲ್ಲಿ RRT ಸಿಬ್ಬಂದಿಗಳನ್ನು ನಿಯೋಜನೆ ಮಾಡಿ ಜನರ ಆತಂಕವನ್ನು ನಿವಾರಿಸಿದ್ದಾರೆ.
