
ಸಕಲೇಶಪುರ :- ಪ್ರತಿನಿತ್ಯ ನೂರಾರು ಪ್ರವಾಸಿಗರು ಕರಡಿಗಾಲ ಕೂಡಿಗೆಯ ಮಾರ್ಗವಾಗಿ ಪ್ರವಾಸಿ ತಾಣವಾದ ಹೊಸಳ್ಳಿ ಗುಡ್ಡ, ಮೂಕನಮನೆ ಪಾಲ್ಸ್, ಸೇರಿದಂತೆ ಈ ಭಾಗದ ಪ್ರವಾಸಿ ತಾಣಗಳಿಗೆ ಹಾಗೂ ರೆಸಾರ್ಟ್ ಗಳಿಗೆ ಹೊರ ಜಿಲ್ಲೆಯವರು ಹಾಗೂ ಹೊರ ರಾಜ್ಯದವರು ಬರುತಿರುತ್ತಾರೆ.
ಈ ವೃತ್ತದಲ್ಲಿರುವ ನಾಲ್ಕು ರಸ್ತೆಗಳು ತಿರುವು ರಸ್ತೆಗಳಾಗಿದ್ದು ರಸ್ತೆಗೆ ಉಬ್ಬಗಳಿಲ್ಲದೆ ಈಗಾಗಲೇ ಈ ವೃತ್ತದಲ್ಲಿ ಎರಡು ಜನ ಅಪಘಾತವಾಗಿ ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ.ಹಾಗೂ ಕಳೆದ ಎರಡು ವರ್ಷದಲ್ಲಿ ಈ ಸ್ಥಳದಲ್ಲಿ ಅಪಘಾತವಾಗಿ ಹತ್ತಕ್ಕೂ ಹೆಚ್ಚು ಮಂದಿ ತಮ್ಮ ಕೈ ಕಾಲುಗಳನ್ನು ಮುರಿದುಕೊಂಡಿದ್ದಾರೆ . ಕೂಡಲೇ ಈ ರಸ್ತೆಗಳಿಗೆ ಉಬ್ಬುಗಳನ್ನು ನಿರ್ಮಿಸಬೇಕೆಂದು ವಳಲಹಳ್ಳಿ ಬೆಳೆಗಾರರ ಸಂಘದವರು ಹಾಗೂ ಗ್ರಾಮಸ್ಥರಿಂದ ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತಕರಾದ ಮುರುಗೇಶ್ ಅವರಿಗೆ ಮನವಿ ಮಾಡಲಾಗಿತ್ತು.
ಸಾರ್ವಜನಿಕರ ಹಾಗೂ ಬೆಳೆಗಾರರ ಸಂಘದವರ ಮನವಿಗೆ ಸ್ಪಂದಿಸಿ ಸ್ಥಳ ಪರಿಶೀಲನೆ ಮಾಡಿ ರಸ್ತೆಗಳಿಗೆ ಉಬ್ಬುಗಳನ್ನು ನಿರ್ಮಿಸಿ ಕೊಡುವುದಾಗಿ ಭರವಸೆಯನ್ನು ನೀಡಿದ್ದರು.
ಇದರ ಫಲವಾಗಿ ಇಂದು ಬೆಳಗ್ಗೆಯಿಂದ 2 ರಸ್ತೆಗೆ ಉಬ್ಬುಗಳನ್ನು ನಿರ್ಮಿಸುವ ಕೆಲಸಕ್ಕೆ ಚಾಲನೆ ನೀಡಿದರು.
ಇವರ ಜನಪರ ಕಾಳಜಿ ಹಾಗೂ ಕೂಡಲೆ ಸಮಸ್ಯೆಗೆ ಸ್ಪಂದಿಸುವ ಮನಸ್ಸು ಮಾಡಿದ ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತಕರಾದ ಮುರ್ಗೆಶ್ ಅವರಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು, ಗ್ರಾಮ ಪಂಚಾಯಿತಿ ಬೆಳೆಗಾರರ ಸಂಘದವರು ಹಾಗೂ ಈ ಭಾಗದ ಪ್ರಯಾಣಿರು, ಪ್ರವಾಸಿಗರಿಂದ ಮೆಚ್ಚುಗೆಯ ಅಭಿನಂದನೆ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ವಳಲಹಳ್ಳಿ ರಾಜೇಗೌಡ, ವಳಲಹಳ್ಳಿ ಬೆಳೆಗಾರ ಸಂಘದ ಅಧ್ಯಕ್ಷರಾದ ಎಂ.ಕೆ ದರ್ಶನ್, ಕಾರ್ಯದರ್ಶಿಗಳಾದ ಅರುಣ್ ಗೌಡ ಕರಡಿಗಾಲ , ಸಂಘಟನಾ ಕಾರ್ಯದರ್ಶಿಗಳಾದ ಅನಿಲ್ ಜಾತಳ್ಳಿ, ಸಹಾಯಕ ಇಂಜಿನಿಯರಾದ ಶಂಭು, ಗುತ್ತಿಗೆದಾರರಾದ ವಳಲಹಳ್ಳಿ ಕುಮಾರ್ ಸೇರಿದಂತೆ ಗ್ರಾಮಸ್ಥರು ಇದ್ದರು.





