
ಸಕಲೇಶಪುರ :- ತಾಲ್ಲೂಕಿನ ಶುಕ್ರವಾರಸಂತೆಯ ಶ್ರೀ ಮಂಜುನಾಥೆಶ್ವರ ವಿದ್ಯಾನಿಕೇತನ ಶಾಲೆಯ 22 ವಿದ್ಯಾರ್ಥಿಗಳು ಜನಪ್ರಿಯ ಕರಾಟೆ ಶಿಕ್ಷಕರಾದ ಕಲಂದರ್ ಬಾಬು ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದು ಇದೇ ತಿಂಗಳ ದಿನಾಂಕ :- 1 ಮತ್ತು 2 ನೇ ತಾರೀಕಿನಂದು ಹಾಸನದ “ಹಾಸನಾಂಬ ಇಂಡೋರ್ ಸ್ಟೇಡಿಯಂ” ನಲ್ಲಿ ನಡೆದ ನ್ಯಾಷನಲ್ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿ 33 ಬಹುಮಾನವನ್ನು ಪಡೆದು ಸಮಗ್ರ ಪ್ರಶಸ್ತಿಗೆ ಬಾಜನರಾದರು.
ಕಥಾ ವಿಭಾಗದಲ್ಲಿ ಪ್ರಥಮ 6 ದ್ವಿತೀಯ 12 ಹಾಗೂ ತೃತೀಯ 3 ಬಹುಮಾನ ಮತ್ತು ಕುಮಿತೆ ವಿಭಾಗದಲ್ಲಿ ಪ್ರಥಮ 2 ದ್ವಿತೀಯ 4 ಹಾಗೂ ತೃತೀಯ 6 ಒಟ್ಟು 33 ಬಹುಮಾನ ಪಡೆದು ತೀರ್ಪುಗಾರರ ಹಾಗೂ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು.
ಈ ವಿದ್ಯಾರ್ಥಿಗಳ ಸಾಧನೆಗೆ ಶಾಲಾ ಮುಖ್ಯ ಶಿಕ್ಷಕರಾದ ಪ್ರತಾಪ್ ಹಾಗೂ ಸಹ ಶಿಕ್ಷಕರಾದ ಜೀವನ ಸೇರಿದಂತೆ ಶಾಲಾ ಶಿಕ್ಷಕ ವೃಂದದವರು ಹಾಗೂ ಆಡಳಿತ ಮಂಡಳಿಯವರು ವಿಶೇಷವಾಗಿ ಶಾಲೆಯಲ್ಲಿ ಅಭಿನಂದಿಸಿದರು.
ಈ ವಿದ್ಯಾರ್ಥಿಗಳ ಸಾಧನೆಗೆ ತಾಲೂಕಿನಾದ್ಯಂತ ಪ್ರಸಂಸೆ ವ್ಯಕ್ತವಾಗಿದೆ.



