
ಸಕಲೇಶಪುರ : ಶ್ರೀ ಸಕಲೇಶ್ವರಸ್ವಾಮಿ ದಿವ್ಯ ರಥೋತ್ಸವ ಫೆಬ್ರವರಿ 13 ಮತ್ತು 14 ರಂದು ನಡೆಯುವ ಕಾರಣ ಈ ರಥೋತ್ಸವಕ್ಕೆ ರಾಜ್ಯದ ಹಲವು ಜಿಲ್ಲೆಗಳಿಂದ ಭಕ್ತಾದಿಗಳು ಆಗಮಿಸುವ ಹಿನ್ನಲೆಯಲ್ಲಿ ಅದಕ್ಕೂ ಮುನ್ನ ಹೇಮಾವತಿ ಸೇತುವೆಯ ಎರಡು ಕಡೆ ಬಣ್ಣ ಹೊಡೆಸಿ ಸುಂದರವಾಗಿ ಕಾಣುವ ಹಾಗೆ ಮಾಡಬೇಕು ಮತ್ತು ರಸ್ತೆ ಗುಂಡಿ ಮುಚ್ಚುವ ಕೆಲಸಕ್ಕೆ ಮನವಿ ಮಾಡಿರುವ ಅಧ್ಯಕ್ಷ ರಮೇಶ್ ಪೂಜಾರಿ ಅವರು ಮಾತನಾಡಿ ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ನಗರವು ಸುಂದರವಾಗಿ ಕಾಣುವಂತೆ ಶೃಂಗಾರಗೊಳಿಸುವ ಜವಾಬ್ದಾರಿ ಸ್ಥಳೀಯ ಪುರಸಭೆಯವರು ಮಾಡಬೇಕು ಆದರೆ ರಥೋತ್ಸವ ಸಮೀಪಿಸುತ್ತಿದ್ದರೂ ಇದುವರೆಗೂ ಸೇತುವೆಯ ಎರಡು ಬದಿಗೂ ಸುಣ್ಣ ಬಣ್ಣ ಮಾಡಿಸಿಲ್ಲದಿರುವುದು ಬೇಸರ ಸಂಗತಿಯಾಗಿದ್ದು ಕೂಡಲೇ ಸೇತುವೆಗೆ ಬಣ್ಣ ಹೊಡೆಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಹಾಗೂ ಸ್ಥಳೀಯ ಪುರಸಭೆ ಆಡಳಿತ ಮಂಡಳಿಗೆ ಮನವಿ ಮಾಡಿದ್ದಾರೆ.
