ಸಕಲೇಶಪುರ : ತಾಲೂಕು ಶರಣ ಸಾಹಿತ್ಯ ಪರಿಷತ್ ವತಿಯಿಂದ ಕೌಡಳ್ಳಿ ಜೆ ಎಸ್ ಎಸ್ ಕಾಲೇಜ್ ನಲ್ಲಿ ನಾಳೆ ಮದ್ಯಾಹ್ನ 3 ಗಂಟೆಗೆ ದತ್ತಿ ಉಪನ್ಯಾಸ ಮತ್ತು ವಿದ್ಯಾರ್ಥಿಗಳಿಗೆ ಚರ್ಚಾ ಸ್ಪರ್ಧೆ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಕಲೇಶಪುರ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಕೆ ಬಿ ಲೋಹಿತ್ ರವರು ವಹಿಸಲಿದ್ದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ನ ಪ್ರಧಾನ ಕಾರ್ಯದರ್ಶಿ ಕಟ್ಟಾಯ ಶಿವಕುಮಾರ್ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ

ಮುಖ್ಯ ಅತಿಥಿಗಳಾಗಿ, ಅರ್ಚನಾ ಜಯಂತ್, ಶಾರದಾ ಗುರುಮೂರ್ತಿ, ಆರ್ ಮಂಜುನಾಥ್, ಪಿ ರೇಣುಕಾರಾಧ್ಯ ಭಾಗವಹಿಸಲಿದ್ದು, ಬೇರೆ ಬೇರೆ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರಿಗೆ ಸನ್ಮಾನ ಕಾರ್ಯಕ್ರಮ ಕೂಡಾ ನೆಡೆಯಲಿದ್ದು, ಹೆಚ್ಚು ಜನರು ಭಾಗವಹಿಸಬೇಕಾಗಿ ಕಾರ್ಯದರ್ಶಿ ಯೆಡೇಹಳ್ಳಿ ಆರ್ ಮಂಜುನಾಥ್ ರವರು ತಿಳಿಸಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *