ಮಲೆನಾಡು ಇಂಜಿನಿಯರಿಂಗ್ ಕಾಲೇಜಿನ ಇನ್ ಚಾರ್ಜ್ ಪ್ರಾಂಶುಪಾಲರಾದ ಡಾ. ಪಿ.ಸಿ. ಶ್ರೀಕಾಂತ್ ಮಾತಾನಾಡಿ ರಾಷ್ಟ್ರೀಯ ವಿಜ್ಞಾನ ದಿನವನ್ನು ಕರ್ನಾಟಕ ಸರ್ಕಾರದ ಸಚೀವಾಲಯದ ಅದೇಶದಂತೆ ಇಂದು ಪ್ರತಿಜ್ಞಾ ವಿಧಿ ಕಾರ್ಯಕ್ರಮ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆಎಂದರು.

ವಿದ್ಯಾರ್ಥಿಗಳಿಗೆ ಹಾಗೂ ನೌಕರರಿಗೆ ಪ್ರತಿಜ್ಞಾವಿಧಿ ಬೋದಿಸಿದರು. ನಾನು ಭಾರತೀಯ ಸಂವಿಧಾನ 51 A(h) ವಿಧೀಯ ಅನ್ವಯ ವೖಚಾರಿಕತೆಯನ್ನು ಬೆಳೆಸಿಕೊಳ್ಳುತ್ತೇನೆ. ನಾನು ಪ್ರಶ್ನೆ ಮಾಡದೇ ಯಾವುದೇ ತರ್ಕ ಒಪ್ಪುವುದಿಲ್ಲ ಹಾಗೂ ಸಂವಿಧಾನ ದ ಮೂಲಭೂತ ಕರ್ತವ್ಯದ ಅಶಯದಂತೆ ಮೌಢ್ಯ ತೆ ಮತ್ತು ಅಂಧಕಾರವನ್ನು ನಿರ್ಮೂಲನೆ ಮಾಡಿ ಜೀವ ಜಗತ್ತಿಗೆ ಪೂರಕವಾದ ಬದುಕನ್ನು ರೂಪಿಸಿಕೊಳ್ಳುತ್ತೇನೆಂದು ಈ ಮೂಲಕ ರಾಷ್ಟ್ರೀಯ ವಿಜ್ಞಾನ ದಿನ ದಂದು ಪ್ರತಿಜ್ಞೆ ಮಾಡಲಾಗುತ್ತಿದೆ ಎಂದರು.

ಕಾಲೇಜಿನ ನಿರ್ಧೇಶಕರಾದ ಡಾ ಎಸ್ ಪ್ರದೀಪ್ ಮಾತಾನಾಡಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಮಹತ್ವ ಶಾಂತಿ ಸಹೋದರತ್ವ ವನ್ನು ಸಮಾಜದಲ್ಲಿ ತಿಳಿಸುವ ಹಿನ್ನಲೆಯಲ್ಲಿ ವೖಜ್ಞಾನಿಕ ಮನೋಬಾವನೆಯನ್ನು ನಾಗರೀಕರಲ್ಲಿ ಬೆಳಸುವುದು ಪ್ರಸ್ತುತ ಕಾಲಘಟ್ಟದಲ್ಲಿ ಅವಶ್ಯಕವಾಗಿದ್ದು ನಮ್ಮ ಭಾರತ ಸಂವಿಧಾನದ ಮೂಲಭೂತ ಕರ್ತವ್ಯಗಳಲ್ಲಿ ಒಂದಾಗಿದೆ ಎಂದರು.

ಈ ನಿಟ್ಟಿನಲ್ಲಿ ಇಂದು ರಾಷ್ಟ್ರೀಯ ದಿನಾಚರಣೆಯ ಸಂದರ್ಭದಲ್ಲಿ ರಾಜ್ಯದ ಎಲ್ಲಾ ಶಾಲಾ ಕಾಲೇಜುಗಳು ಹಾಗೂ ಸರ್ಕಾರಿ ಕಛೇರಿಗಳಲ್ಲಿ ಏಕಕಾಲದಲ್ಲಿ ವೖಜ್ಞಾನಿಕ ಮನೋಬಾವನೆ ಹಾಗೂ ಮಾನವೀಯ ಮೌಲ್ಯ ಗಳನ್ನು ಮೖಗೂಡಿಸಿಕೊಳ್ಳುವಂತೆ ಪ್ರತಿಜ್ಞಾ ವಿಧಿ ಸ್ವೀಕರಿಸಿ ಮೂಲಭೂತ ಕರ್ತವ್ಯ ಗಳನ್ನು ಪಾಲಿಸುವ ಮೂಲಕ ರಾಷ್ಟ್ರೀಯ ವಿಜ್ಞಾನ ದಿನಚಾರಣೆಯನ್ನು ಅಚರಿಸಲಾಗುತ್ತೀದೆ ಎಂದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಸಹಾಯಕ ಆಡಳಿತ ಅಧೀಕಾರಿ ಪಾರ್ವತಮ್ಮ. ಕಾಲೇಜಿನ ಸ್ಟಾಪ್ ಕ್ಲಬ್ ಕಾರ್ಯದರ್ಶಿ ಡಾ. ಡಿ. ಎಸ್.ಕೀರ್ತಿಕುಮಾರ್ ಉಪಸ್ಥಿತರಿದ್ದರು.ಕಾರ್ಯಕ್ರಮದ ಸ್ವಾಗತವನ್ನು ವಿದ್ಯಾರ್ಥಿ ಕ್ಷೇಮಭೀವೃದ್ದಿ ಅಧೀಕಾರಿ ಡಾ. ಕೆ.ಅರ್. ದುಷ್ಂತ್ ಕುಮಾರ್,ಸ್ವಾಗತ ಮಾಡಿದರು .

ಸಹ ವಿದ್ಯಾರ್ಥಿ ಕ್ಷೇಮಭೀವೃದ್ದ ಅಧೀಕಾರಿ ಡಾ, ಇಂದ್ರ ಬಹುದ್ದೂರು ವಂದನಾರ್ಪಣೆ ಮಾಡಿದರು. ನಿರುಪಣೆಯನ್ನು ವಿದ್ಯಾರ್ಥಿ ಕ್ಷೇಮಭೀವೃದ್ದಿ ವಿಭಾಗದ ಅಧೀಕ್ಷಕರಾದ ಶಿವಕುಮಾರ್ ನೆರೆವೇರಿಸಿದರು. ಪ್ರತಿಜ್ಞಾ ವಿಧಿ ಕಾರ್ಯಕ್ರಮದಲ್ಲಿ ಕಾಲೇಜಿನ ಡಿನ್ ರವರು, ಎಲ್ಲಾ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು, ನೌಕರರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *