
ಸಕಲೇಶಪುರ : ಶುಕ್ರವಾರ ಪಟ್ಟಣದ ಮೈತ್ರಿ ಹಾಲ್ ನಲ್ಲಿ ಛಾಯಾಚಿತ್ರ ಗ್ರಾಹಕರ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಅವರು”ಛಾಯಾಗ್ರಹಕರು ಸಮಾಜದ ಕನ್ನಡಿ ಇದ್ದಹಾಗೆ ಛಾಯಾಗ್ರಹಕರ ಕಾರ್ಯ ಅನನ್ಯ. ಅವರ ಹಿತಾಸಕ್ತಿಗಳನ್ನು ಕಾಪಾಡಲು ನಾನು ಬದ್ದ ಎಂದರು.
ಯಾವುದೇ ವೃತ್ತಿಯಲ್ಲಿ ಸಂಘಟನೆ ಬಹಳ ಮುಖ್ಯ. ಛಾಯಾಗ್ರಹಕರು ನಿಜವಾದ ಕಲೆಗಾರರು. ಪ್ರೀತಿಯಿಂದ ಮಾಡಿದ ಕೆಲಸಕ್ಕೆ ಜನ ಸದಾ ಮೌಲ್ಯ ನೀಡುತ್ತಾರೆ. ಈ ಕ್ಷೇತ್ರಕ್ಕೆ ಸೂಕ್ತವಾದ ಸೌಲಭ್ಯಗಳ ಒದಗಿಸುವ ಸಂಬಂಧ ಸರ್ಕಾರದ ಮಟ್ಟದಲ್ಲಿ ಧ್ವನಿ ಎತ್ತಲು ಸಿದ್ದನಿದ್ದೇನೆ ಎಂದರು.
ಮೂರ್ತಿ ಸ್ಟುಡಿಯೋ ಮಾಲೀಕ ಕರುಣಾಕರ ಮಾತನಾಡಿ, ಛಾಯಾಗ್ರಹಣ ಕೇವಲ ಒಂದು ಉದ್ಯೋಗವಲ್ಲ, ಅದು ಕಲೆ. ಬೆಳಕು, ಬಣ್ಣ ಮತ್ತು ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿದಾಗ ಮಾತ್ರ ಅದ್ಭುತ ಚಿತ್ರಗಳು ಮೂಡಿಬರುತ್ತವೆ. ದಿನನಿತ್ಯ ಹೊಸತನ್ನು ಕಲಿಯಬೇಕು. ಕೆಲವೊಮ್ಮೆ ಛಾಯಾಗ್ರಹಕರ ಶ್ರಮಕ್ಕೆ ನಿಗದಿತ ಮೌಲ್ಯ ದೊರೆಯದು. ಸಂಘಟನೆಗಳ ಮೂಲಕವೇ ಹಿತ ಕಾಯಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಛಾಯಚಿತ್ರ ಸಂಘದ ಅದ್ಯಕ್ಷ ವಿನು, ಕಾರ್ಮಿಕ ನಿರೀಕ್ಷಕ ರವಿ, ಹಾಸನ ಜಿಲ್ಲಾ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಲಿಂಗರಾಜು, ಧರ್ಮರಾಜ್, ಲೋಕೇಶ್, ವಸಂತ್ ಕುಮಾರ್ ಪೂಜಾರಿ ಹಾಗೂ ಇತರರು ಉಪಸ್ಥಿತರಿದ್ದರು..
