
ಸಕಲೇಶಪುರ:- ಮಲೆನಾಡಿನ ಗ್ರಾಮೀಣ ಪ್ರದೇಶಗಳಲ್ಲಿ ಹಗಲಿನ ಸಮಯದಲ್ಲಿ ವಿದ್ಯುತ್ ಲೋಡ್ ಶೇಡ್ಡಿಂಗ್ ಮಾಡುತ್ತಿದ್ದು, ಇದರಿಂದ ಈ ಭಾಗದ ರೈತರಿಗೆ, ಕಾಫಿ ಬೆಳೆಗಾರರಿಗೆ ತೊಂದ್ರೆಯಾಗುತ್ತಿದೆ.ಆದೊಷ್ಟು ಬೇಗಾ ಲೋಡ್ ಶೇಡ್ಡಿಂಗ್ ನಿಲ್ಲಿಸದಿದ್ದರೆ, ಸಕಲೇಶಪುರ ಚೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಬೇಕಾಗುತ್ತದೆ. ಎಂದು ಸಕಲೇಶಪುರ ತಾಲ್ಲೂಕು ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಹಾಗೂ ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ಗೌರವ ಕಾರ್ಯದರ್ಶಿಯಾದ ಲೋಹಿತ್ ಕೌಡಳ್ಳಿ ಎಚ್ಚರಿಕೆ ನೀಡಿದ್ದಾರೆ.
ಕಾಫಿ ಬೆಳೆಯನ್ನೇ ಆಧಾರವನ್ನಾಗಿಸಿಕೊಂಡಿರುವ ಬೆಳೆಗಾರರಿಗೆ ಪ್ರತಿ ವರ್ಷ ಫೆಬ್ರವರಿ 20 ರಿಂದ ಮಾರ್ಚ್ ಕೊನೆಯ ತನಕ ಕಾಫಿ ಗಿಡಗಳಿಗೆ ನೀರು ಕೊಟ್ಟು ಹೂವಾಗಿಸುವುದು ಅನಿವಾರ್ಯ.ಚೆಸ್ಕಾಂ ಅಧಿಕಾರಿಗಳ ಆಶ್ವಾಸನೆ ಮೇರೆಗೆ ಬೆಳೆಗಾರರೆಲ್ಲರೂ IP ಸೆಟ್ ವಿದ್ಯುತ್ ನಿಂದ ತಮ್ಮ ತೋಟಗಳಲ್ಲಿ ನೀರಾವರಿ ವ್ಯವಸ್ಥೆ ಮಾಡಿಕೊಂಡಿದ್ದು, ಕೇವಲ 2 ತಿಂಗಳ ನೀರಾವರಿ ವ್ಯವಸ್ಥೆಗಾಗಿ ವರ್ಷ ಪೂರ್ತಿ ವಿದ್ಯುತ್ ಶುಲ್ಕವನ್ನು ಇಲಾಖೆಗೆ ಕಟ್ಟುತಿದ್ದು, ಸರಿಯಾದ ಸಮಯದಲ್ಲಿ ಉತ್ತಮ ಮಟ್ಟದ ವಿದ್ಯುತ್ ಕೊಡುವಲ್ಲಿ ಚೆಸ್ಕಾಂ ಇಲಾಖೆ ವಿಫಲವಾಗಿದ್ದಾರೆ. ಇದರಿಂದ ಬೆಳೆಗಾರರಿಗೆ ತುಂಬಾ ತೊಂದರೆಯಾಗುತ್ತಿದೆ.ಮುಂದಿನ ದಿನಗಳಲ್ಲಿ ಇದೆ ರೀತಿ ಚೆಸ್ಕಾ ಅಧಿಕಾರಿಗಳು ಬೆಳೆಗಾರರಿಗೆ ಸ್ಪಂದಿಸುವ ಕೆಲಸ ಮಾಡದಿದ್ದರೆ ಉಗ್ರ ಹೋರಾಟ ಅನಿವಾರ್ಯವೆಂದರು.
ಸಂಜೆ ರಾತ್ರಿ ಮತ್ತು ಬೆಳಗ್ಗಿನ ಸಮಯದಲ್ಲಿ ಕಾಡನೆ ಸಮಸ್ಯೆ ಇದ್ದು ಹಗಲಿನ ಸಮಯದಲ್ಲಿ ವಿದ್ಯುತ್ ಕಣ್ಣಮುಚ್ಚಾಲೇ ಆದರೆ ರೈತರು, ಬೆಳೆಗಾರರು ಬದುಕುವುದು ಹೇಗೆ?.ತಮ್ಮ ಬೆಳೆಗಳನ್ನು ರಕ್ಷಿಸುವುದು ಹೇಗೆ?.ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
