ಹಾಸನ: ರಾಜ್ಯ ಮಟ್ಟದ ವೀರಶೈವ ಲಿಂಗಾಯತ ಸಮಾಜದ ಮಹಾಸಂಗಮ ಸಭೆಯನ್ನು ರಾಜ್ಯ ಮಟ್ಟದ ಮುಖಂಡರು ೨೦೨೫ ಮಾಚ್ ೪ ರಂದು ಮಂಗಳವಾರ ಬೆಳಿಗ್ಗೆ ೧೦-೩೦ಕ್ಕೆ ಬೆಂಗಳೂರು ಅರಮನೆ ಮ್ಯೆದಾನ ಗಾಯಿತ್ರಿ ವಿಹಾರದಲ್ಲಿ ಸಮಾಜದ ಮುಖಂಡರು ಹಾಗೂ ಮಾಜಿ ಸಚಿವರಾದ ಎಂ.ಪಿ. ರೇಣುಕಚಾರ್ಯ ರವರ ನೇತೃತ್ವದಲ್ಲಿ ಸಭೆ ಏರ್ಪಡಿಸಲಾಗಿದೆ.

ಇದೆ ವೇಳೆ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ತಾಲೂಕು ಅಧ್ಯಕ್ಷ ಕಟ್ಟಾಯ ಶಿವಕುಮಾರ್ ಮಾಧ್ಯಮದೊಂದಿಗೆ ಮಾತನಾಡಿ, ಈ ಸಭೆಯಲ್ಲಿ ವೀರಶೈವ ಲಿಂಗಾಯತ ಸಮಾಜದ ಮುಖಂಡರು ವಿವಿದ ಮಠದ ಮಠಾಧೀಶರು ಒಳಗೋಂಡಂತೆ ವೀರಶೈವ ಲಿಂಗಾಯತ ಸಂಘಟನೆ ವಿಚಾರಗಳನ್ನು ಒಳಗೋಂಡಂತೆ ಚರ್ಚಿಸಲು ಸಭೆ ಕರೆಯಲಾಗಿದೆ.

ಈ ಸಭೆಯಲ್ಲಿ ನಮ್ಮ ಹಾಸನ ಜಿಲ್ಲೆಯ ವೀರಶೈವ ಲಿಂಗಾಯತ ಸಮಾಜ ಬಾಂಧವರು, ಮುಖಂಡರು, ಸಮಾಜದ ವಿವಿಧ ಸಂಘ ಸಂಸ್ಥೆಯವರು, ವೀರಶೈವ ಲಿಂಗಾಯತ ಸಮಾಜದ ಚಿಂತಕರು ಭಾಗವಹಿಸಲು ಕೋರಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಕಟ್ಟಾಯ ಶಿವಕುಮಾರ್ ಮೊಬೈಲ್ ಸಂಖ್ಯೆ ೯೪೪೮೨೨೦೮೫೦ ಸಂಪರ್ಕಿಸಬಹುದಾಗಿದೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *