ಕೇರಳ : ಮಾನವ ಮತ್ತು ವನ್ಯಜೀವಿ ಸಂಘರ್ಷದ ಹೋರಾಟಕ್ಕೆ ಹೊಸ ಬೆಳವಣಿಗೆ ನೆಡೆದಿದ್ದು ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ ಕೇರಳ ತಮಿಳು ನಾಡಿನ ಹಲವು ಸಂಘಟನೆಯ ಹಲವಾರು ಈ ದಿನ ದಕ್ಷಿಣ ಭಾರತದ ಕಿಸಾನ್ ಮೋರ್ಚಾ ಹಾಗೂ ಹಲವು ಚಳುವಳಿಯ ಮುಖಂಡರಾದ ಕೇರಳದ ಪಿ ಟಿ ಜಾನ್ ಅವರ ನೇತೃತ್ವದಲ್ಲಿ ಕೇರಳದ ಕಾಲಪೆಟ್ (ವಯನಾಡ್ ) ನಲ್ಲಿ ಸಭೆ ನೆಡೆಸಿದ್ದು 3 ರಾಜ್ಯದ ಸಂಘಟನೆಯ ಪ್ರಮುಖರು ಭಾಗವಹಿಸಿದ್ದು, ಮುಂದಿನ ದಿನಗಳಲ್ಲಿ ದೆಹಲಿ ಮಟ್ಟದಲ್ಲಿ ಹೋರಾಟ ಮಾಡಲು ತೀರ್ಮಾನಿಸಲಾಯಿತು.

ಸಭೆಯಲ್ಲಿ ಕರ್ನಾಟಕದಿಂದ ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ಗೌರವ ಕಾರ್ಯದರ್ಶಿ ಲೋಹಿತ ಕೌಡಹಳ್ಳಿ ಖಜಾಂಚಿ ಸಚಿನ್ ಹೆತ್ತೂರ್, ಸಹಕಾರ್ಯದರ್ಶಿ ಅರುಣ್ ಅರಕಲಗೂಡು, ಕರ್ನಾಟಕ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬಸವರಾಜ್ ತುಮಕೂರು, ಹಾಗೂ ಮಂಡ್ಯ, ಮೈಸೂರು, ಚಾಮರಾಜನಗರದ ರೈತ ಮುಖಂಡರು, ಕೇರಳದ ಪಾಲಿಕಡ್ ನ ಮಾಜಿ ಶಾಸಕರು, ತಮಿಳು ನಾಡಿನ ಸೇಲ್ವಮ್ ಹಾಗೂ ಹಲವಾರು ರೈತ ಮುಖಂಡರು ಅದಿವಾಸಿ ಮುಖಂಡರು ಭಾಗಿಯಾಗಿದ್ದು, ಮುಂದಿನ ವಾರದಲ್ಲಿ ಈ ಹೋರಾಟದ ಬಗ್ಗೆ ಚನ್ನೈ ನಲ್ಲಿ ಪತ್ರಿಕಾ ಗೋಷ್ಠಿ ನೆಡೆಸಲಾಗುವುದು ಎಂದು ತಿಳಿಸಿದ್ದಾರೆ

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *