ಹಾಸನದ ಆದಿಚುಂಚನಗಿರಿ ಮಠಕ್ಕೆ ಇಂದು ನೂತನವಾಗಿ ಸಂಘಟಿಸಿರುವ ನಾಡಪ್ರಭು ಕೆಂಪೇಗೌಡ ಸಮಿತಿಯ ವತಿಯಿಂದ ಶ್ರೀ ಶ್ರೀ ಶಂಭುನಾಥ ಸ್ವಾಮಿಜಿಯ ಆಶೀರ್ವಾದ ಪಡೆದು ಮೇ ತಿಂಗಳಲ್ಲಿ ನೆಡೆಯುವ ಕೆಂಪೇಗೌಡ ಪ್ರತಿಮೆಗೆ ಕ್ಷೀರ ಅಭಿಷೇಕ ಕಾರ್ಯಕ್ರಮಕ್ಕೆ ದಿನಾಂಕ ಹಾಗೂ ಕಾರ್ಯಕ್ರಮದ ರೂಪು ರೇಷಗಳ ಬಗ್ಗೆ ಚರ್ಚಿಸಲಾಯಿತು.

ಇದಕ್ಕೆ ಸ್ಪಂದಿಸಿರುವ ಸ್ವಾಮೀಜಿ ಮುಂದಿನ ದಿನದಲ್ಲಿ ಶ್ರೀ ಶ್ರೀ ಶ್ರೀ ನಿರ್ಮಲನಂದನಾಥ ಮಹಾ ಸ್ವಾಮೀಜಿ ಅವರ ಅಭಿಪ್ರಾಯ ಪಡೆದು ದಿನಾಂಕವನ್ನು ತಿಳಿಸಲಾಗುವುದುದೆಂದು ತಿಳಿಸಿದರು.

ಎಲ್ಲಾ ಸಮುದಾಯದ ಮುಖಂಡರುಗಳ ಜೊತೆ ಚರ್ಚೆ ಮಾಡಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಪಕ್ಷಾತೀತವಾಗಿ ಮತ್ತು ಜಾತ್ಯತೀತವಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿಸಿಕೊಂಡು ಮುಂದುವರೆಯಲು ಸೂಚಿಸಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *