ಆಲೂರು : ದಿ. ಪುನೀತ್ ರಾಜ್ ಕುಮಾರ್ ಅಭಿಮಾನಿ ಬಳಗದಿಂದ 50 ನೇ ವರ್ಷದ ಹುಟ್ಟುಹಬ್ಬವನ್ನು ಆಲೂರು ತಾಲ್ಲೂಕು ಕಾಮತಿ ಗ್ರಾಮದ ಯುವಕರು ಹಾಗೂ ಗ್ರಾಮಸ್ಥರಿಂದ ಪುನೀತ್ ಹುಟ್ಟುಹಬ್ಬ ಆಚರಿಸಲಾಯಿತು

ಪುನೀತ್ ರಾಜ್ ಕುಮಾರ್ ರವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಕೇಕ್ ಕತ್ತರಿಸಿ ಸಡಗರ ಸಂಭ್ರಮದಿಂದ ಆಚರಿಸಿದರು..

ಈ ಸಂದರ್ಭದಲ್ಲಿ ಪುನೀತ್ ಅಭಿಮಾನಿ ವಿನೋದ್ ಮಾತಾನಾಡಿ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸುವ ಖುಷಿ ಪುನೀತ್ ಅಭಿಮಾನಿಗಳದ್ದಾಗಿತ್ತು. ಆದರೆ,ಈಗ ದೈಹಿಕವಾಗಿ ಪುನೀತ್ ನಮ್ಮ ಜೊತೆಗಿಲ್ಲ. ಹಾಗಂತ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಆಚರಿಸದೇ ದೂರ ಇರುವವರಲ್ಲ. ಅವರು ಸಮಸ್ತ ಕನ್ನಡಿಗರ ಮನಸಿನಲ್ಲಿ ಅಜರಾಮರವಾಗಿ ಅಚ್ಚಳೆಯದೇ ಉಳಿದಿದ್ದಾರೆ ಎಂದರು..

ಗ್ರಾಮಸ್ಥರಾದ ಮಂಜುನಾಥ್ ಮಾತಾನಾಡಿ ಪುನೀತ್ ರಾಜ್‌ಕುಮಾರ್ ಬದುಕಿದ್ದಾಗ ಸಾಕಷ್ಟು ಸಾಮಾಜಿಕ ಕಾರ್ಯಗಳನ್ನು ಸದ್ದಿಲ್ಲದೇ ಮಾಡಿದ್ದಾರೆ. ಅವರು ಮಾಡಿದ ಕಾರ್ಯಗಳು, ಸಹಾಯಗಳು ಅವರ ಸಾವಿನ ನಂತರ ಒಂದೊಂದಾಗಿಯೇ ಜನರ ಮುಂದೆ ಬಂದಿದೆ. ತಾವು ಮಾಡಿದ ಸಹಾಯವನ್ನು ಕೊನೆಯವರೆಗೂ ಗುಟ್ಟಾಗಿಯೇಇಟ್ಟ ಪುನೀತ್ ಅವರ ಈ ಕಾರ್ಯ ಎಂದೆಂದಿಗೂ ಶ್ಲಾಘನೀಯ.ಮುಂದೆಯೂ ಕೂಡ ಅವರಂತೆ ಅವರ ಅಭಿಮಾನಿಗಳು ಕೂಡಾ ಪುನೀತ್ ಅವರ ಹೆಜ್ಜೆಯನ್ನೇ ಅನುಸರಿಸಲು ಮುಂದಾಗಿದ್ದಾರೆ ಎಂದರು..

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *