ಬೇಲೂರು: ಅರೇಹಳ್ಳಿ ಹೋಬಳಿಯ ನಾರ್ವೆ ಯಲ್ಲಿ ಬಾರಿಸು ಕನ್ನಡ ಡಿಂಡಿಮವ ಕಾರ್ಯಕ್ರಮ.ನಮ್ಮ ನೆಡೆ ಹಳ್ಳಿ ಕಡೆ ವಾಕ್ಯ ದೊಂದಿಗೆ ತಾಲ್ಲೂಕು ಕನ್ನಡ ಪರಿಷತ್ ಬೇಲೂರು ಮತ್ತು ನಾರ್ವೆ ಪೇಟೆ ಗ್ರಾಮ ಪಂಚಾಯತಿ ಸಂಯುಕ್ತ ಆಶ್ರಯದಲ್ಲಿ ನಡೆಯಿತು

ಕಾರ್ಯಕ್ರಮದ ಉದ್ಘಾಟನೆಯನ್ನು ಸಂಶೋಧಕರಾದ ನಾರ್ವೆ ರಾಜಶೇಖರ್ ನೆರವೇರಿಸಿದರು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಸ್. ಕೆ. ಮಾಲಾಶ್ರೀ ವಹಿಸಿದರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ನಮ್ಮ ಮಾತೃಭಾಷೆ ಕನ್ನಡವನ್ನು ಯಾರು ಸಹ ಮರೆಯಬಾರದು ಕನ್ನಡ ಭಾಷೆಗೆ ಮೊದಲ ಪ್ರಾಮುಖ್ಯತೆ ನೀಡಬೇಕು ನೆಲ ಜಲ ಭಾಷೆ ಎಂಬ ವಿಷಯ ಬಂದಾಗ ನಾವು ಕನ್ನಡಿಗರು ಎಂದು ಹೆಮ್ಮೆಯಿಂದ ಹೋರಾಡಬೇಕು ವಿದ್ಯಾರ್ಥಿಗಳು ಪರೀಕ್ಷೆ ಗಳಲ್ಲಿ ಕನ್ನಡ ಪಠ್ಯಕ್ಕೆ ಆದ್ಯತೆ ಕೊಟ್ಟು ಹೆಚ್ಚಿನ ಅಂಕವನ್ನು ಪಡೆಯಬೇಕು ಎಂಟು ಜ್ಞಾನಪೀಠ ಪ್ರಶಸ್ತಿ ಬಂದಿರುವುದು ನಮ್ಮ ಕನ್ನಡ ಭಾಷೆಗೆ ಬಂದ ಗೌರವ

ಮುಂದಿನ ದಿನಗಳಲ್ಲಿ ಗ್ರಾಮೀಣ ಮಟ್ಟದಲ್ಲಿ ಕನ್ನಡ ಸಾಹಿತ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ನಾರ್ವೆ ಪೇಟೆ ಗ್ರಾಮ ಪಂಚಾಯಿತಿ ವತಿಯಿಂದ ಡಿಜಿಟಲ್ ಗ್ರಂಥಾಲಯ ಪ್ರಾರಂಭವಾಗಿದೆ ಸಾರ್ವಜನಿಕರು ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಿ ಎಂದರು.

ಶ್ರೀ ರಾಮಾಯಣ ದರ್ಶನಂ ಕಾವ್ಯ ವಚನವನ್ನು ಬೇಲೂರು ಇಂದಿರಮ್ಮ ವಾಚಿಸಿದರು

ಕಾರ್ಯಕ್ರಮದ ಸಂದರ್ಭದಲ್ಲಿತಾ. ಕನ್ನಡ ಪರಿಷತ್ ಅಧ್ಯಕ್ಷರಾದ ಮ. ನ. ಮಂಜೇಗೌಡ ,ಕಮಲ ಚನ್ನಪ್ಪ , ಗ್ರಾಮ ಪಂಚಾಯತಿ ಉಪಾಧ್ಯಕ್ಷ ಮಲ್ಲಿಕಾರ್ಜುನ್ ಸುಲಗಳಲೆ, ಸದಸ್ಯರಾದ ಮಂಜುನಾಥ, ಮಲ್ಲಿಕಾರ್ಜುನ ನಾರ್ವೆ, ಪಿಡಿಒ ಚಂದ್ರಯ್ಯ, ಚುಟುಕು ಸಾಹಿತಿ ತಾಸಿನ ರಝಾಕ್ ನಾರ್ವೆ, ಕನ್ನಡ ಸಾಹಿತ್ಯ ಪರಿಷತ್ ಸದಸ್ಯರಾದ ಸೋಮನಾಥ್, ವಕೀಲ ಚಂದ್ರು, ವಿಜಯರಾಜ್, ಕುಮಾರ ಸ್ವಾಮಿ, ಪ್ರಕಾಶ್, ಶೋಭಾ ಹರೀಶ್, ತಾ ಪಂ ಮಾಜಿ ಸದಸ್ಯ ಸೋಮಯ್ಯ, ಜೆ ಎಸ್ ಎಸ್ ಮುಖ್ಯ ಶಿಕ್ಷಕ ಉಮೇಶ್. ಡಿಎಸ್ಎಸ್ ನಿಂಗಾರಾಜ್, ಎಸ್. ಡಿ. ಎ. ಸುನೀತ ಗ್ರಂಥಪಾಲಕ ಚಂದ್ರು ಹಾಗೂ ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *