ಸಕಲೇಶಪುರ : ತಾಲ್ಲೂಕು ಹಾನುಬಾಳು ಹೋಬಳಿ ದೇಖಲ ಗ್ರಾಮದಲ್ಲಿ ಅಕ್ರಮವಾಗಿ ಮೀಸಲು ಅರಣ್ಯ ಪ್ರದೇಶವನ್ನ ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಹೊರಗಿನಿಂದ ಬಂದು ನೆಲೆಸಿ, ಅರಣ್ಯ ಕಡಿದು ಕದ್ದು ಸಾಗಾಣಿಕೆ ಮಾಡುತ್ತಿರುವ ಒತ್ತುವರಿದಾರರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಿ, ಒತ್ತುವರಿ ತೆರವು ಗೊಳಿಸಿ ಅರಣ್ಯ ರಕ್ಷಣೆ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ತಾಲೂಕಿನ ಹಾನುಬಾಳು ಹೋಬಳಿ ದೇಖಲ ಗ್ರಾಮದ ಸರ್ವೆ ನಂಬರ್ 196 ನಲ್ಲಿ ಇರುವ ಅರಣ್ಯವನ್ನ ಒತ್ತುವರಿ ಮಾಡಿಕೊಂಡು ಅಕ್ರಮ ಚಟುವಟಿಕೆ ಮಾಡಲು ವ್ಯವಸ್ಥಿತವಾದ ಷಡ್ಯಂತ್ರ ನಡಿಯುತಿದ್ದು ಇದರ ಬಗ್ಗೆ ತನಿಖೆಗೆ ಆದೇಶಿಸಿ ಬೇಕು ಹಾಗೂ ಅರಣ್ಯ ಪ್ರದೇಶ ಆಗಿರುವುದರಿಂದ ಈ ದಟ್ಟ ಅರಣ್ಯದಲ್ಲಿ ಭಯೋತ್ಪದಕ ಚಟುವಟಿಕೆ ನಡಿಯುವ ಅನುಮಾನವಿದ್ದು, ಭಯೋತ್ಪದಕ ತರಬೇತಿ ಹಾಗು ನಿಗೂಢ ಸಭೆಗಳು ನಡಿಯುವ ಆತಂಕವಿದ್ದು, ಇದರ ಬಗ್ಗೆ ಪೊಲೀಸ್ ಇಲಾಖೆ ಸೂಕ್ತ ಮಾಹಿತಿ ಪಡೆದು ಕ್ರಮ ಜರುಗಿಸಬೇಕು.

ದೇಖಲ ಗ್ರಾಮಕ್ಕೆ ಹೊರಗಿನಿಂದ ಬರುವ ಮುಸ್ಲಿಮರು ಅಕ್ರಮವಾಗಿ ಅರಣ್ಯ ಜಮೀನು ಸೈನಿಕರಿಗೆ ಮೀಸಲು ಇಟ್ಟಿರುವ ಜಮೀನು ಕಬಳಿಸಿ ಒತ್ತುವರಿ ಮಾಡಿ ಆಂತರಿಕ ಭದ್ರತೆಗೆ ಧಕ್ಕೆ ತರುತ್ತಿದ್ದಾರೆ.

ದೇಖಲ ಗ್ರಾಮದಲ್ಲಿ ಅನೇಕ ನಕಲಿ ಮತ್ತು ಪರವಾನಿಗೆ ಇಲ್ಲದ ಬಂದೂಕು, ಪಿಸ್ತುಲು ನಾಡ ಬಂದೂಕು, ವಿದೇಶಿ ಪಿಸ್ತುಲುಗಳು ಇದ್ದು, ಕಾಡು ಪ್ರಾಣಿ ಬೇಟೆ, ವನ್ಯ ಮೃಗಗಳ ಬೇಟೆ ಎಗ್ಗಿಲ್ಲದೆ ಸುತ್ತ ಮುತ್ತ ನಡಿಯುತಿದ್ದು, ಈ ಬಗ್ಗೆ ಮಾಹಿತಿ ದೂರು ನೀಡಿದಲ್ಲಿ ಸ್ಥಳೀಯರಿಗೆ ಬೆದರಿಸುತ್ತ ಬೆದರಿಕೆ ಹಾಕಿ ಭಯದ ವಾತಾವರಣ ನಿರ್ಮಾಣ ಮಾಡಿದ್ದಾರೆ. ದೇಖಲ ಗ್ರಾಮದ ನಿವಾಸಿ ಮಹಮದ್ ಸಫಾನ್ ಎಂಬುವವನು ಹಾಡುಹಗಲೇ ಎಮ್ಮೆಗೆ ಶೂಟೌಟ್ ಮಾಡಿ ಕೊಂದು ಮಾಂಸವನ್ನು ಕೇರಳಕ್ಕೆ ಸಾಗಿಸಲು ವ್ಯವಸ್ಥೆ ಮಾಡಿಕೊಂಡಿದ್ದು ,ಈ ಬಗ್ಗೆ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೊಕದ್ದಮ್ಮೆ ದಾಖಲಾಗಿದ್ದು, ಈ ಕೆಳಕಂಡ ಪ್ರಕರಣ ಸಂಖ್ಯೆ FIR NO- 141/2023. ದಿನಾಂಕ 27.06.23 ಎಂದು ದಾಖಲಾಗಿದ್ದು ಈ ಬಗ್ಗೆ ನಕಲಿ ಬಂದೂಕುಗಳ ಪ್ರಕರಣ ದೇಶದ ಭದ್ರತೆಗೆ ಸವಾಲಾಗಿದ್ದು ಇದರ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ತನಿಖೆ ಮಾಡಲು ನಿರ್ದೇಶನ ನೀಡಬೇಕು ಎಂದು ಪ್ರತಿಭಟನೆಕರಾರು ಕೋರಿದ್ದಾರೆ .

ಸ್ಥಳಪರಿಶೀಲನೆ ಮಾಡಿ ವರದಿ ಪಡೆದು ಸಂಪೂರ್ಣ ಅರಣ್ಯ ಇಲಾಖೆ ಜಮೀನನ್ನು ಒತ್ತುವರಿ ಮಾಡಿರೋದನ್ನ ತೆರವುಗೊಳಿಸಬೇಕು ಮತ್ತು ಮೀಸಲು ಅರಣ್ಯಕ್ಕೆ ಶಿಫಾರಸ್ಸು ಮಾಡಬೇಕು ಎಂದು ಆಗ್ರಹಿಸಿದ್ದಾರೆ .

ಈ ಸಂದರ್ಭದಲ್ಲಿ ರಾಮದೂತ ಹಿಂದೂ ಮಹಾಗಣಪತಿ ಸಮಿತಿ ಅಧ್ಯಕ್ಷರಾದ ಪ್ರದೀಪ್ ಪೂಜಾರಿ, ಮಂಜುನಾಥ ಕಬ್ಬಿನಗದ್ದೆ, ಗಿರೀಶ್ ಮಾರನಹಳ್ಳಿ, ವೀಜಿತ್, ರವಿ ಹೆಬ್ಬಸಾಲೆ, ವೀರೇಶ್, ಶಿವೂ ಜಿಪ್ಪಿ ,ದೀಪಕ್ ಹರೀಶ್ ಗೌಡ , ಸುರೇಂದ್ರ ಇತರರು ಇದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *