ಹಾಸನ: ಪರೀಕ್ಷೆ ಬರೆಯುವ ಎಸ್.ಎಸ್.ಎಲ್.ಸಿ. ಮಕ್ಕಳ ಉತ್ಸಾಹ ನೋಡಿದರೇ ಈ ಬಾರಿ ಉತ್ತಮ ಪಲಿತಾಂಶ ನಮ್ಮ ಜಿಲ್ಲೆಗೆ ಬರುತ್ತದೆ ಎಂದು ಸಂಸದರು ವಿಶ್ವಾಸವ್ಯಕ್ತಪಡಿಸಿದಲ್ಲದೇ ಧೈರ್ಯದಿಂದ ಮತ್ತು ಆತ್ಮಸ್ಥೆರ್ಯದಿಂದ ಎಲ್ಲಾ ಪರೀಕ್ಷೆಯನ್ನು ಬರೆಯಲಿ ಎಂದು ಇದೊಂದು ಪರೀಕ್ಷಾ ಹಬ್ಬ ಎಂದು ಎಂಪಿ ಶ್ರೇಯಸ್. ಎಂ. ಪಟೇಲ್ ಕರೆದು ಶುಭ ಹಾರೈಸಿದರು.

ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆಯಲು ಮಕ್ಕಳು ಶುಕ್ರವಾರ ಬೆಳಿಗ್ಗೆ ೮:೩೦ ರಿಂದಲೇ ತಮ್ಮ ಪರೀಕ್ಷಾ ಕೇಂದ್ರಗಳಲ್ಲಿ ಜಮಾಯಿಸಿದ್ದರು. ಕೆಲವರು ಕೊನೆ ಕ್ಷಣದ ಸಿದ್ಧತೆಯಲ್ಲಿ ಕುಳಿತು ಓದುತ್ತಿದ್ದರೇ ಇನ್ನು ಕೆಲ ವಿದ್ಯಾರ್ಥಿಗಳು ಕನ್ನಡ ಭಾಷೆ ಈಜೀ ಎಂದು ಸಂತೋಷದಿಂದ ಸ್ನೇಹಿತರೊಡನೆ ಮಾತನಾಡಿ ಸಮಯ ಕಳೆಯುತ್ತಿದ್ದರು. ಇನ್ನು ಸಲ್ಪ ಸಮಯ ತಡವಾಗಿ ಬಂದ ವಿದ್ಯಾರ್ಥಿಗಳು ಕೊಠಡಿ ಸಂಖ್ಯೆಯನ್ನು ಗಾಬರಿಯಿಂದ ನೋಟಿಸ್‌ ಬೋರ್ಡಿನಲ್ಲಿ ವೀಕ್ಷಣೆ ಮಾಡುತ್ತಿದ್ದು, ಈ ವೇಳೆ ಪೊಲೀಸ್‌ ಪೇದೆ ಓರ್ವರು ಮಾನವಿಯತೆ ದೃಷ್ಠಿಯಲ್ಲಿ ವಿದ್ಯಾರ್ಥಿಗಳಿಗೆ ಸಹಾಯ ಮಾಡಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *