
ಸಕಲೇಶಪುರ :-ಹೆತ್ತೂರು ಹೋಬಳಿ ವಳಲಹಳ್ಳಿ ಗ್ರಾ.ಪಂ ವ್ಯಾಪ್ತಿಯಲ್ಲಿ ಬರುವ 14 ಹಳ್ಳಿಗಳಲ್ಲಿ ಇದುವರೆಗೂ ಉಳಿಕೆಯಾಗಿರುವ 94 C ಮತ್ತು ಫಾರ್ಮ್ ನಂ 53 ನಲ್ಲಿ ಉಳಿದಿರುವ ಫಲಾನುಭವಿಗಳಿಗೆ ಹಕ್ಕು ಪತ್ರ ಮತ್ತು ಸಾಗುವಳಿ ಚೀಟಿಯನ್ನು ಆದಷ್ಟು ಬೇಗ ಮಾಡಿ ಕೊಡಬೇಕಾಗಿ ಮತ್ತು ಈಗಾಗಲೆ ಸಾಗುವಳಿ ನೀಡಿರುವ ಜಮೀನು ಮಂಜೂರುದಾರರಿಗೆ ಅರಣ್ಯ ಇಲಾಖೆಗೆ ಶಿಫಾರಸ್ಸು ಮಾಡಿರುವ ಮರಮಾಲಿಕೆಯನ್ನು ನಿಗಿದಿಪಡಿಸಲು ಈ ಹಿಂದೆ ತಮ್ಮ ಇಲಾಖೆಯಿಂದ ಶಿಫಾರಸ್ಸು ಮಾಡಿದ್ದು, ಆದ್ದರಿಂದ ಬೆಳೆಗಾರರಿಗೆ ಯಾವುದೇ ತರಹದ ಅನುಕೂಲಗಳು ಅರಣ್ಯ ಇಲಾಖೆಯಿಂದ ಆಗಿರುವುದಿಲ್ಲ.
ತಾವು ಮತ್ತೊಮ್ಮೆ ಶಿಫಾರಸ್ಸು ಮಾಡಿ ಮೇಲ್ಕಂಡ ಯೋಜನೆಗಳನ್ನು ವಳಲಹಳ್ಳಿ ಗ್ರಾ.ಪಂ ವ್ಯಾಪ್ತಿಯ ಬೆಳೆಗಾರರಿಗೆ ಮತ್ತು ಕೂಲಿ ಕಾರ್ಮಿಕ ಬಡವರಿಗೆ 94 C ಹಕ್ಕು ಪತ್ರ 53ರ ಕಮಿಟಿಯಲ್ಲಿ ಪಾಸಾಗಿರುವ ಫಲಾನುಭವಿಗಳಿಗೆ ಸಾಗುವಳಿ ಚೀಟಿಯನ್ನು ಕೊಡಿಸಿಕೊಡಬೇಕಾಗಿ ತಾಲ್ಲೂಕು ದಂಡಾಧಿಕಾರಿ ಅರವಿಂದ ಕೆ. ಎಂ ಅವರಿಗೆ ಮನವಿ ಪತ್ರವನ್ನು ನೀಡಿದರು.
ಈ ಸಂದರ್ಭದಲ್ಲಿ ವಳಲಹಳ್ಳಿ ಬೆಳಗಾರರ ಸಂಘದ ಅಧ್ಯಕ್ಷರಾದ ದರ್ಶನ್ ಮರ್ಜನಹಳ್ಳಿ, ಉಪಾಧ್ಯಕ್ಷರಾದ ವಳಲಹಳ್ಳಿ ರುದ್ರೇಶ್,ಕಾರ್ಯದರ್ಶಿ ಅರುಣ್ ಗೌಡ, ಖಜಾಂಚಿ ಎಚ್.ಬಿ ಹೂವಣ್ಣ ಗೌಡ ಹಿರಿದನಹಳ್ಳಿ ಉಪಸ್ಥಿತರಿದ್ದರು.
