
ಹಾಸನ ತಾಲ್ಲೂಕು ಕಟ್ಟಾಯ ಹೋಬಳಿಯ ಸತ್ತೀಗರಹಳ್ಳಿ ಗ್ರಾಮದ ಶ್ರೀ ಬಸವೇಶ್ವರ ಸ್ವಾಮಿ ನೂತನ ದೇವಾಲಯದ ಜೀರ್ಣೋದ್ದಾರ ಮತ್ತು ನೂತನ ವಿಗ್ರಹಗಳ ಪುನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ದಿನಾಂಕ 14-4-2025 ರಂದು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ತುಮಕೂರು ಸಿದ್ದಗಂಗಾ ಮಠದ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ ರವರು ಮಾತಾನಾಡಿ ಧರ್ಮ ಸಂಸ್ಕೃತಿ ಉಳಿಸಿ ಬೆಳಸುವಂತಾರಾಗಬೇಕು, ಪ್ರಮಾಣಿಕ ಜೀವನದ. ಹಾದಿಯಲ್ಲಿ ನಾವು ನಡೇಯಬೇಕು ಆನಂದ ನೆಮ್ಮದಿ ಜೀವನಬೇಕು. ಒಂದು ಸಂಸಾರ ಸುಖ ಜೀವನವಾಗಬೇಕಾದರೆ ಹೆಣ್ಣೀನ ಪಾತ್ರ ಬಹಳ ಮುಖ್ಯವಾದು, ಮಕ್ಕಳಿಗೆ ಉತ್ತಮ ಸಂಸ್ಕಾರ ಅಚಾರ ವಿಚಾರಗಳನ್ನು ಕಲಿಸುವ ತಾಯಿ ಮಕ್ಕಳಿಗೆ ವಿದ್ಯೇ ಕಲಿಸುವಲ್ಲಿ ಪ್ರಮುಖರಾಗಿರುತ್ತಾರೆ.
ಹಳ್ಳಿಯ ಜೀವನ ಎಷ್ಟೇ ಕಷ್ಟ ವಿದ್ದರು ಅದರ್ಶ ಜೀವನ ನಡೆಸುವಲ್ಲಿ ಪ್ರಾಮಣೀಕತೆ ಹೆಚ್ಚಿನದಾಗಿರುತ್ತದೆ ಎಂದು ತಿಳಿಸಿದರು. ದೇವರ ಪೂಜೆ ನಿರಂತರವಾಗಿ ನಡೆಯಬೇಕು ಮನಸ್ಸು ಕಟ್ಟುವ ಕೇಲಸವಾಗಬೇಕು ಎಂದರು.ಸತ್ತೀಗರಹಳ್ಳಿ ಗ್ರಾಮದ ಯುವಕರು ಸೇನೆ ಯಲ್ಲಿ ದೇಶ ರಕ್ಷಣೆಗೆ ಹೇಚ್ತೀನ ಯುವಕರು ಕೆಲಸ ಮಾಡುತ್ತೀರುವುದು ಸಂತೋಷ ಕೇಲಸ ಎಂದರು.
ಸತ್ತೀಗರಹಳ್ಳಿ ಸದಾಶಿವ ಸ್ವಾಮಿಜಿ ಉತ್ತಮ ಸ್ವಾಮೀಜಿರಾಗಿ ಕೆಲಸ ನಿರ್ವಹೀಸಿದ್ದಾರೆ ಶಿವೖಕ್ಕರಾಗಿರುವ ಅವರ ನೆನಪು ನಮ್ಮೇಲ್ಲರಿಗೂ ನೇನಪೀರಲಿ ಎಂದರು.
ಕಾರ್ಯಕ್ರದಲ್ಲಿ ನುಗ್ಗೆಹಳ್ಳಿ ಪುರವರ್ಗದ ಮಠದ ಮಠಾಧೀಶರಾದಡಾ ಮಹೇಶ್ವರ ಶಿವಚಾರ್ಯ ಸ್ವಾಮೀಜಿ, ರಾಮಯೋಗೀಶ್ವರಬೇಬಿ ಮಠದ ಮಠಾದೀಶರಾದ ಶಿವಬಸವ ಸ್ವಾಮಿಗಳು. ತೇಜೂರು ಸಿದ್ದರಾಮೇಶ್ವರ ಮಠದ ಮಠಾಧೀಶರಾದ ಕಲ್ಯಾಣಸ್ವಾಮಿಜಿ ಟಿ ಮಾಯಗೋಡನಹಳ್ಳಿ ರಾಜಾಪುರ ಮಠದ ಮಠಾಧೀಶರಾದ ಸೋಮಶೇಖರಶಿವಚಾರ್ಯ ಸ್ವಾಮಿಜಿ.ಕೇಸತ್ತರುಮಠದ ಬಸವರಾಜೇಂದ್ರಸ್ವಾಮೀಜಿ, ಸಿಡಿಗಹಲೆ ಮಠದ ಮಠಾಧೀಶರಾದ ಇಮ್ಮಡಿ ಶಿವಲಿಂಗ ಸ್ವಾಮಿಜಿ. ಕಲ್ಮಠದ ಮಹಂತ ಸ್ವಾಮಿಜಿ, ಹಾಗೂ ಹಾಸನ ಜಿಲ್ಲಾ ಅಖೀಲ ಭಾರತ ವೀರಶೈವ ಲಿಂಗಾಯತ ಮಹಾಸಭೇಯ ಅಧ್ಯಕ್ಷರಾದ ನವೀಲೆ ಪರಮೇಶ್, ಹಾಸನ ತಾಲ್ಲೂಕು ಅಖೀಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷರಾದ ಕಟ್ಟಾಯ ಶಿವಕುಮಾರ್, ಪತ್ರಕರ್ತರು ಹಾಗೂವೀರಶ್ಯೇವ ಸಮಾಜದ ಮುಖಂಡರಾದ ಅನಂದ್ ಪಾಟೀಲ್. ಗ್ರಾಮದ ಮುಖಂಡರು ವೇಧೀಕೆಯಲ್ಲಿದ್ದರು.
ಹಿಂದಿನ ದಿನ ನುಗ್ಗೆ ಹಳ್ಳಿ ಮಹೇಶ್ವರ ಶಿವಚಾರ್ಯ ಸ್ವಾಮಿಜಿರವರ ನೇತೃತ್ವದಲ್ಲಿ ನೂತನ ವಿಗ್ರಹ ಗಳನ್ನು 108 ಕುಂಭಗಳ ಸಮೇತ ಗಂಗಾ ಪೂಜೆಯೋಂದಿಗೆ ಗ್ರಾಮದ ಬೀದಿಗಳಲ್ಲಿ ನವೀಲೆ ರಾಜು, ರವರಿಂದ ಅಮೋಘವಾದ ಕರಡೆವಾದ್ಯ ಮತ್ತು ತುಮಕೂರಿನ ಸುಪ್ರಸಿದ್ದ ಲಿಂಗಧೀರರು ಡಾ ವೀರೇಶ್ ಮತ್ತು ರೇಣುಕ ಪ್ರಸಾದ್ರವರ ಭಧ್ರಕಾಳಿ ವೇಷದಾರಿಗಳಿಂದ ಹಾಗೂ ಮಂಗಳವಾದ್ಯ ವೖಭವಗಳೋಂದಿಗೆ ಉತ್ಸವ ನಡೆಯಿತು.
ದಿನಾಂಕ 14-4-2025ರಂದು ಸಿದ್ದಗಂಗೇಯ ಮಠಾದೀಶರಾದ ಸಿದ್ದಲಿಂಗ ಮಹಾ ಸ್ವಾಮಿಗಳಿಂದ ಬೆಳಿಗ್ಗೆ ಕಳಶಾರೋಹಣ ಕಾರ್ಯಕ್ರಮ ನಡೇಯಿತು. ಸಾರ್ವಜನಿಕರು ಹಾಗೂ ಮಹೀಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಹಾಗೂ ಮೂರು ದಿನಗಳ ಕಾಲ ಬಂದಂತ ಭಕ್ತರಿಗೆ ದಾಸೋಹ ವ್ಯವಸ್ಥೆ ಮಾಡಿದ್ದರು. ಸತ್ತಿಗರಹಳ್ಳಿ ಶ್ರೀ ಬಸವೇಶ್ವರಯುವಕ ಮಂಡಳಿ ಸದಸ್ಯರು, ಹಾಗೂ ಗ್ರಾಮದ ಹೀರಿಯರು, ದೇವಸ್ಥಾನದ ಪದಾಧಿಕಾರಿಗಳು, ಹಾಗೂ ಮುಖಂಡರು ಭಾಗವಹಿಸಿದ್ದರು.





