
ಸಕಲೇಶಪುರ. ಪಟ್ಟಣದ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಸಂಘ (plrd) ವತಿಯಿಂದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ . ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಸಂಘ (plrd) ವತಿಯಿಂದ ಇಂದು ನಡೆದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ ಒಟ್ಟು 14 ಸದಸ್ಯರಿದ್ದು, ಎರಡನೇ ಬಾರಿಗೆ ಅಧ್ಯಕ್ಷರಾಗಿ ವೈ ಪಿ ರಾಜೇಗೌಡರು ಆಯ್ಕೆಯಾಗಿದ್ದಾರೆ,
ಉಪಾಧ್ಯಕ್ಷರಾಗಿ ಸಾಮಾಜಿಕ ಹೋರಾಟಗಾರರು ಹಾಗೂ ದಲಿತ ಸಂಘ ಜಿಲ್ಲಾ ಸಂಚಲಕರದ ವಳಲಹಳ್ಳಿ ವೀರೇಶ್ ಆವಿರೋದ ವಾಗಿ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಮುರಳಿ ಮೋಹನ್, ಬೈರಮುಡಿ ಚಂದ್ರು, ಮಾಜಿ ತಾಲೂಕು ಪಂಚಾಯಿತಿ ಉಪಾಧ್ಯಕ್ಷರಾದ ಕೃಷ್ಣೇ ಗೌಡ ಕರಡಿಗಾಲ,ಗುದ್ದು ಲೋಕೇಶ್, ಕಾಂಗ್ರೆಸ್ ಮುಖಂಡರಾದ H H ಉದಯ್, ತಾಲೂಕು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಘಟಕದ ಅಧ್ಯಕ್ಷರಾದ ಪ್ರಶಾಂತ್ ಕಲ್ಗಣೆ, ಕಾಂಗ್ರೆಸ್ ಮುಖಂಡರಾದ ದೇವರಾಜ್ ಬೈಕೆರೆ, ಗಿರೀಶ್ ಕಲ್ಗಣೆ, ಕಾಂಗ್ರೆಸ್ ಮುಖಂಡರಾದ ರುದ್ರೇಶ್ ವಳಹಳ್ಳಿ, ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಲೋಕೇಶ್ ದೇವಲದಕೆರೆ ಅನಿಲ್ ಬಿಳಸರೆ ಲಕ್ಷ್ಮಣ್ ಹುಲ್ಲೇ ಮನೆ, ಸೇರಿದಂತೆ ಮುಖಂಡರು ಇತರರು ಹಾಜರಿದ್ದರು.



