ಸಕಲೇಶಪುರ : ದಶಕಗಳ ಹಿಂದೆ ಅತ್ತಿಹಳ್ಳಿ ಊರಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವು ಸಕಲೇಶಪುರ ತಾಲೂಕಿನಲ್ಲಿ ಪ್ರಸಿದ್ಧಿಯಾಗಿದ್ದು, ನಿಮಗೆಲ್ಲಾ ತಿಳಿದೇ ಇದೆ.

ಇಷ್ಟು ವ್ಯವಸ್ಥಿತವಾಗಿದ್ದ, ಆಸ್ಪತ್ರೆ ಇತ್ತಿಚೀನ ವರ್ಷಗಳಲ್ಲಿ ಮೂಲಭೂತ ಸೌಕರ್ಯಗಳು ಸಂಪೂರ್ಣವಾಗಿ ಹದಗೆಟ್ಟಿದ್ದು, ಇದಕ್ಕೆ ಸರ್ಕಾರ ವತಿಯಿಂದ ಆಗಲಿ, ಜನಪ್ರತಿನಿಧಿಗಳ ವತಿಯಿಂದ ಆಗಲಿ ಯಾವುದೇ ಪರಿಹಾರ ಸಿಗದೇ ಇರುವುದು ವಿಷಾದನೀಯ.

ಆರೋಗ್ಯ ಕೇಂದ್ರವು ಸುಮಾರು 25 ಕ್ಕೂ ಹೆಚ್ಚು ಗ್ರಾಮಗಳಿಗೆ ಅವಶ್ಯಕತೆ ಇದ್ದು, ಇದರ ನಿರ್ಲಕ್ಷ್ಯದ ಕಾರಣದಿಂದ ಸುತ್ತ ಮುತ್ತಲಿನ ಜನರಿಗೆ ಇದರ ಉಪಯೋಗ ಪಡೆದುಕೊಳ್ಳಲು ಸಾದ್ಯವಾಗುತ್ತಿಲ್ಲ.

ಕಳೆದ 3 ತಿಂಗಳುಗಳಿಂದ ಆಸ್ಪತ್ರೆಗೆ ವೈದ್ಯರು ಬರದೇ ಇರುವ ಕಾರಣದಿಂದಾಗಿ ಅನಾರೋಗ್ಯಕ್ಕೆ ತುತ್ತಾಗಿರುವ ವಯಸ್ಕರು, ಮಕ್ಕಳು, ಬಾಣಂತಿಯರಿಗೆ ಅನಾನುಕೂಲ ಉಂಟಾಗಿದೆ.

ಪರಿಸ್ಥಿತಿ ಹೀಗೆ ಇರುವಾಗ ಸೂಕ್ತ ಚಿಕಿತ್ಸೆ ಪಡೆಯಲು ಹೆತ್ತೂರು, ಶನಿವಾರಸಂತೆ, ಸಕಲೇಶಪುರಕ್ಕೆ ತೆರಳುವ ಪರಿಸ್ಥಿತಿ ಎದುರಾಗಿದೆ.

ಇನ್ನಾದರೂ ಇದಕ್ಕೆ ಸಂಬಂಧಪಟ್ಟ ಆರೋಗ್ಯ ಇಲಾಖೆ, ಜನಪ್ರತಿನಿಧಿಗಳು ಹಾಗೂ ಮುಖಂಡರುಗಳು ಇದರ ಬಗ್ಗೆ ಗಮನಹರಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಲು ಸಹಕಾರ ನೀಡಬೇಕೆಂದು ಅತ್ತಿಹಳ್ಳಿ ಯೋಗೇಶ್ ಪಟೇಲ್ ರವರು ಮನವಿ ಮಾಡಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *