ಆಲೂರು:- ಪಟ್ಟಣದ ಬಿ ಎಂ ರಸ್ತೆಯಲ್ಲಿರುವ ಎಸ್ ಬಿ ಐ ಬ್ಯಾಂಕ್ ಮುಂಭಾಗ ಇಂದು ಬೆಳಗ್ಗೆ 10 50 ರ ಸಮಯದಲ್ಲಿ ಆಲೂರು ಮಾರ್ಗದಿಂದ ಹಾಸನ ಮಾರ್ಗವಾಗಿ ತೆರಳುತ್ತಿದ್ದ ಮೂರು ಕಾರುಗಳ ಸರಣಿ ಅಪಘಾತವು ನಡೆದಿದ್ದು, ಪಟ್ಟಣದ ಪಟ್ಟಣ ಪಂಚಾಯಿತಿ ಮುಂಭಾಗ ಇರುವ ಕಟ್ಟಡಗಳು ಹಾಗೂ ಚರಂಡಿ ರಸ್ತೆಗೆ ಒತ್ತುವರಿಯಾಗಿದ್ದು, ಪ್ರತಿನಿತ್ಯ ಎಸ್ ಬಿ ಐ ಬ್ಯಾಂಕ್ ಹಾಗೂ ಅಕ್ಕಪಕ್ಕದ ಕಟ್ಟಡಗಳ ಮುಂದೆ ಅವೈಜ್ಞಾನಿಕವಾಗಿ ವಾಹನಗಳನ್ನು ದ್ವಿಚಕ್ರ ವಾಹನಗಳನ್ನು ನಿಲ್ಲಿಸುವುದೆ ಕಾರಣವಾದರೂ.. ಪಟ್ಟಣ ಪಂಚಾಯಿತಿ ಅಧಿಕಾರಿಗಳ ಹಾಗೂ ಸದಸ್ಯರ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷವೇ ಇಷ್ಟಕ್ಕೆ ಅಲ್ಲ ಕಾರಣವಾಗಿದೆ.

ಈ ಸ್ಥಳದಲ್ಲಿ ಪ್ರತಿನಿತ್ಯ ಇದೇ ರೀತಿ ಅವೈಜ್ಞಾನಿಕವಾಗಿ ವಾಹನಗಳ ನಿಲ್ಲಿಸುವುದು ಸರ್ವೇಸಾಮಾನ್ಯವಾಗಿದೆ. ಇದರಿಂದ ಪ್ರತಿನಿತ್ಯ ಕೆ ಎಸ್ ಆರ್ ಟಿ ಸಿ ವಾಹನಗಳು ಎಲ್ಲಾ ಕಾಲೇಜು ವಾಹನಗಳು ಸಾರ್ವಜನಿಕರ ವಾಹನಗಳು ಪ್ರತಿನಿತ್ಯ ಟ್ರಾಫಿಕ್ ಕಿರಿಕಿರಿ ಅನುಭವಿಸುತ್ತಿವೆ. ಹಲವಾರು ವರ್ಷಗಳಿಂದ ಪಟ್ಟಣ ಪಂಚಾಯಿತಿ ಮುಂಭಾಗವೇ ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಯಾವುದೇ ಕ್ರಮ ಕೈಗೊಳ್ಳದೆ ಇರುವುದು ಶಾಸಕರುಗಳ ಹಾಗೂ ಪಟ್ಟಣ ಪಂಚಾಯತಿ ಅಧಿಕಾರಿಗಳ, ಜನಪ್ರತಿನಿಧಿಗಳ ಭ್ರಷ್ಟ ಆಡಳಿತಕ್ಕೆ ಸಾಕ್ಷಿಯಾಗಿದೆ. ಅಷ್ಟೇ ಅಲ್ಲದೆ ಪಟ್ಟಣದಲ್ಲಿ ವ್ಯವಸ್ಥಿತ ವಾಹನಗಳ ನಿಲುಗಡೆ ಮಾಡುವಲ್ಲಿ ಕ್ಷೇತ್ರದ ಶಾಸಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ವಿಫಲರಾಗಿದ್ದಾರೆ. ಇನ್ನಾದರೂ ವ್ಯವಸ್ಥಿತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿ ಆಗುವ ಅಡಚಣೆಗಳ ಅಪಘಾತಗಳನ್ನು ತಪ್ಪಿಸಲಿ ಎಂಬುದು ಜನ ಅಭಿಪ್ರಾಯವಾಗಿದೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *