ಸಕಲೇಶಪುರ :- ತಾಲ್ಲೂಕಿನ ಹೊಸೂರು ಗ್ರಾಮಪಂಚಾಯಿತಿ ವ್ಯಾಪ್ತಿಯ ತಡಕಲು ಗ್ರಾಮದಲ್ಲಿ ಸುಮಾರು 40 ದಲಿತ ಕುಟುಂಬಗಳಿದ್ದು ತಮ್ಮ ಕುಟುಂಬದವರಿಗೆ ಮನೆ ಕಟ್ಟಲು ಜಾಗವಿಲ್ಲ. ಸರ್ಕಾರಿ 70 ಎಕರೆ ಗೋಮಾಳದ ಸ್ಮಶಾನ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಇದರಿಂದ ಮನೆ ಕಟ್ಟಲು ಸಮಸ್ಯೆಯಾಗಿದ್ದು ಸ್ವಂತ ಮನೆಯನ್ನು ಕಟ್ಟಿಕೊಳ್ಳಲು ಒತ್ತುವರಿಯಾಗಿರುವ ಸ್ಮಶಾನ ಜಾಗವನ್ನು ತೆರವು ಗೊಳಿಸುವಂತೆ ತಾಲೂಕು ದಂಡಾಧಿಕಾರಿಗಳಿಗೆ ತಡಕಲು ಗ್ರಾಮಸ್ಥರು ಮನವಿ ಪತ್ರವನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ತಾಲೂಕು ದಲಿತ ಸಂಘರ್ಷ ಸಮಿತಿಯ ಸಂಚಾಲಕರಾದ ತಡಕಲು ಶಿವಕುಮಾರ್,ಸುರೇಶ್, ಜಯಣ್ಣ,ಈರಯ್ಯ, ಲಿಂಗರಾಜ್, ಕೋಮರಯ್ಯ ದಯಾನಂದ, ಪ್ರದೀಪ್, ಸುಬ್ರಮಣಿ, ಲೋಕೇಶ್, ಜಯಪ್ಪ ಹೊಸೂರು, ರಂಜನ್, ಉಮೇಶ್ ಉಪಸ್ಥಿತರಿದ್ದರು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *